ತುಂತುರು ಮಳೆ ಮತ್ತು ತಂಪಾದ ಗಾಳಿಯಿಂದ ಬೆಂಗಳೂರು ಗಡಗುಟ್ಟುತ್ತಿದೆ. ಎರಡು ದಿನದಿಂದ ಬಿಸಿಲು ಕಾಣೆಯಾಗಿದೆ. ಸಾಮಾನ್ಯವಾಗಿ 28 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತಿದ್ದ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆ.ಗೆ ಇಳಿಕೆಯಾಗಿದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆ.ಇತ್ತು. ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಳೆಯಾಗಲಿದ್ದು, ಇಬ್ಬನಿಯೂ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತದ ಪ್ರಭಾವ ಈ ವಾತಾವರಣಕ್ಕೆ ಕಾರಣ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
Courtesyg: Google (photo)