ಚೀನಾ ದೇಶವು ಚಂದ್ರನ ಮೇಲಿನ ಶಿಲೆ ಹಾಗೂ ಮಣ್ಣು ಸೇರಿದಂತೆ ಇತರ ಮಾದರಿಗಳನ್ನು ಭೂಮಿಗೆ ತರುವ ಸಲುವಾಗಿ ‘ಚಾಂಗಿ–5’ಯನ್ನು ಯಶಸ್ವಿಯಾಗಿ ಚೀನಾ ಉಡಾವಣೆ ಮಾಡಿತ್ತು. ಅಲ್ಲಿನ ಶಿಲೆ, ಮಣ್ಣು ಸಂಗ್ರಹಿಸಿ, ಆರ್ಬಿಟರ್ಗೆ ರವಾನಿಸಿದ್ದು, ಈ ಮಾದರಿಗಳನ್ನು ಹೊತ್ತ ಗಗನನೌಕೆ ಭೂಮಿಯತ್ತ ಮುಖಮಾಡಿದೆ. ನ.24ರಂದು ಈ ಗಗನನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಂದ್ರನ ಉತ್ತರಕ್ಕಿರುವ ಓಷನ್ ಆಫ್ ಸ್ಟಾರ್ಮ್ ಎಂದು ಕರೆಯಲಾಗುವ ಪ್ರದೇಶದ ಬಳಿ ಈ ವ್ಯೋಮನೌಕೆ ಡಿ.೧ರಂದು ತಲುಪಿತ್ತು. ಗಗನನೌಕೆಯ ಭಾಗವಾದ ಅಸೆಂಡರ್ ಅಲ್ಲಿನ ಮೇಲ್ಮೈಯಲ್ಲಿನ ಶಿಲೆಗಳನ್ನು ಸಂಗ್ರಹಿಸಿತು ಎಂದು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಹೇಳಿದೆ.
Courtesyg: Google (photo)