ಜಗತ್ತಿನ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ನ ಎತ್ತರ 8,848.86 ಮೀಟರ್ ಎಂದು ನೇಪಾಳ ಹಾಗೂ ಚೀನಾ ಘೋಷಿಸಿವೆ.1954ರಲ್ಲಿ ಭಾರತ ಘೋಷಿಸಿದ ಅಳತೆಯಾದ 8,848 ಮೀಟರ್‌ಗಿಂತ ಇದು 86 ಸೆಂಮೀ(2.8 ಅಡಿ) ಹೆಚ್ಚು. 2014ರಲ್ಲಿ ಸಂಭವಿಸಿದ ಭೂಕಂಪ ಮತ್ತಿತರ ಕಾರಣಗಳಿಂದ ಪರ್ವತದ ಎತ್ತರದಲ್ಲಿ ಬದಲಾವಣೆ ಆಗಿರಬಹುದಾದ ಹಿನ್ನೆಲೆಯಲ್ಲಿ ನಿಖರ ಎತ್ತರವನ್ನು ಅಳೆಯಲು ನೇಪಾಳ ಸರ್ಕಾರ ನಿರ್ಧರಿಸಿತ್ತು.
1975 ಹಾಗೂ 2005ರಲ್ಲಿ ಚೀನಾ ನಡೆಸಿದ ಆರು ಸುತ್ತಿನ ಸಮೀಕ್ಷೆ ಹಾಗೂ ವೈಜ್ಞಾನಿಕ ಸಂಶೋಧನೆಯಲ್ಲಿ ಎವರೆಸ್ಟ್ನ ಎತ್ತರ ಕ್ರಮವಾಗಿ 8,848.13 ಮೀಟರ್ ಹಾಗೂ 8,844.43 ಮೀಟರ್ ಎಂದು ಕಂಡುಬAದಿತ್ತು. ಮೌಂಟ್ ಎವರೆಸ್ಟ್ ತುದಿ ಮೂಲಕ ಗಡಿ ರೇಖೆ ಸಾಗುವುದಕ್ಕೆ ಸಮ್ಮತಿಸುವ ಮೂಲಕ, 1961ರಲ್ಲಿ ಗಡಿ ಸಂಘರ್ಷವನ್ನು ಚೀನಾ ಹಾಗೂ ನೇಪಾಳ ಇತ್ಯರ್ಥಗೊಳಿಸಿದ್ದವು. ಎವರೆಸ್ಟ್ನ ನಿಖರ ಎತ್ತರದ ಪತ್ತೆಯಿಂದ ಹಿಮಾಲಯ ಹಾಗೂ ಕ್ವಿನ್‌ಘೈ–ಟಿಬೆಟ್ ಪ್ರಸ್ಥಭೂಮಿಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಅಧ್ಯಯನ ಮಾಡಬಹುದು ಎಂದು ಚೀನಾದ ವಿಜ್ಞಾನಿ ಗಾವ್ ಡೆಂಗೈ ತಿಳಿಸಿದ್ದಾರೆ.
Courtesyg: Google (photo)