2021ರ ದ್ವಿತೀಯಾರ್ಧದಲ್ಲಿ 5ಜಿ ದೂರಸಂಪರ್ಕ ಸೇವೆಗಳನ್ನು ಆರಂಭಿಸುವ ಸೂಚನೆಯನ್ನು ಮುಕೇಶ್ ಅಂಬಾನಿ ನೀಡಿದ್ದಾರೆ. ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ 5ಜಿ ಸೇವೆ ಆರಂಭಿಸಲು ನೀತಿ ನಿರೂಪಣೆ ಹಂತದಲ್ಲಿ ಕೆಲವು ಕ್ರಮ ಕೈಗೊಳ್ಳಬೇಕಿದೆ. ದೇಶ ಅತ್ಯುತ್ತಮ ಡಿಜಿಟಲ್ ಸಂಪರ್ಕ ಹೊಂದಿದ್ದು, ಈ ಸ್ಥಾನವನ್ನು ಉಳಿಸಿ ಕೊಳ್ಳಬೇಕೆಂದಿದ್ದರೆ 5ಜಿ ಸೇವೆಗಳನ್ನು ತ್ವರಿತವಾಗಿ ಆರಂಭಿಸಬೇಕು. ಎಲ್ಲರ ಕೈಗೆಟಕುವ ದರದಲ್ಲಿ ಹಾಗೂ ಎಲ್ಲ ಕಡೆ ಸಿಗುವಂತಾಗಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 2021ರ ದ್ವಿತೀಯಾರ್ಧದಲ್ಲಿ ೫ ಜಿ ಸಂಪರ್ಕ ಸಾಧ್ಯವಾಗಲಿದೆ. ಜಿಯೊ 5ಜಿ ಸೇವೆಗಳು ದೇಶದಲ್ಲೇ ಅಭಿವೃದ್ಧಿಪಡಿಸಿದ ನೆಟ್‌ವರ್ಕ್ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಿವೆ ಎಂದರು.
ದೇಶದ 30 ಕೋಟಿ ಮೊಬೈಲ್ ಫೋನ್ ಬಳಕೆದಾರರು 2ಜಿ ಕಾಲದಲ್ಲೇ ಇದ್ದಾರೆ. ಅವರಿಗೆ ಸ್ಮಾರ್ಟ್ಫೋನ್ ಖರೀದಿಸಲು ಹಾಗೂ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಆಗಲು ಮತ್ತು ಡಿಜಿಟಲ್ ಅರ್ಥ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಆಗಲು ನೀತಿ ನಿರೂಪಣೆ ಹಂತದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಖೇಶ್ ಹೇಳಿದರು.
Courtesyg: Google (photo)