ಮುಂಬೈ ಷೇರುಪೇಟೆ ಇದೇ ಮೊದಲ ಬಾರಿಗೆ 46 ಸಾವಿರದ ಗಡಿ ದಾಟಿದೆ. ವಿದೇಶಿ ಬಂಡವಾಳದ ಒಳಹರಿವು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿನಿಂದ ಮುಂಬೈ ಷೇರುಪೇಟೆ ದಾಖಲೆ ಮಟ್ಟ ತಲುಪಿತು. ಬಿಎಸ್ಇ ಸೂಚ್ಯಂಕ 495 ಅಂಶ ಹೆಚ್ಚಳದೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ 46,103 ಅಂಶ ದಾಖಲಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 136 ಅಂಶ ಹೆಚ್ಚಳದೊಂದಿಗೆ ದಾಖಲೆಯ ಮಟ್ಟ 13,529 ಅಂಶ ತಲುಪಿತು.
ಏಷ್ಯನ್ ಪೇಂಟ್ಸ್ ಶೇ.3.7ರಷ್ಟು ಗಳಿಕೆ ಹಾಗೂ ಕೋಟಕ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್, ರಿಲಯನ್ಸ್ ಮತ್ತು ಐಟಿಸಿ ಷೇರುಗಳು ಗಳಿಕೆ ಕಂಡುಕೊAಡವು. ಆದರೆ, ಅಲ್ಟಾçಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಮಾರುತಿ, ಎಸ್ಬಿಐ ಮತ್ತು ಬಜಾಜ್ಆಟೊ ಷೇರುಗಳ ಮೌಲ್ಯ ಇಳಿಕೆ ಕಂಡಿದೆ.
ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಆರಂಭವಾಗಿದೆ. ಇದರಿಂದ ಪಿಡುಗು ಹೆಚ್ಚಾಗುವ ಆತಂಕ ತಗ್ಗಿದೆ. ಲಾಕ್ಡೌನ್ ಸಡಿಲಿಕೆಯಿಂದ ವಹಿವಾಟು ಹೆಚ್ಚಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ನ ಮುಖ್ಯಸ್ಥ ವಿನೋದ್ ಮೋದಿ ಹೇಳಿದ್ದಾರೆ. ಸಣ್ಣ ಮತ್ತು ಮಧ್ಯಮ ಹಂತದ ಕಂಪನಿಗಳ ವಹಿವಾಟು ಉತ್ತಮಗೊಂಡಿದೆ. ಲಸಿಕೆ ಲಭ್ಯತೆ ಹಾಗೂ ದೇಶಗಳು ಪ್ರಕಟಿಸಿರುವ ಆರ್ಥಿಕ ಉತ್ತೇಜನ ಪ್ಯಾಕೇಜ್ಗಳು ಷೇರುಪೇಟೆಯಲ್ಲಿ ಉತ್ಸಾಹ ಹೆಚ್ಚಿಸಿವೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
Courtesyg: Google (photo)