ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವ ನವೋದ್ಯಮ ಕಂಪನಿ ಬೌನ್ಸ್, ಫೆಬ್ರವರಿಗೆ ಮುನ್ನ ನಾಲ್ಕು ಸಾವಿರ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಸೇವೆಗೆ ಮುಕ್ತಗೊಳಿಸುತ್ತೇನೆ ಎಂದು ಹೇಳಿದೆ. ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಬೌನ್ಸ್ ಕಂಪನಿ ಸೇವೆಗೆ ಸಿದ್ಧಗೊಳಿಸಿರುವ ದ್ವಿಚಕ್ರ ವಾಹನಗಳ ಪೈಕಿ ಶೇ.೫೦ರಷ್ಟು ವಿದ್ಯುತ್ ಚಾಲಿತ. 2021ರಲ್ಲಿ ಸಾಂಪ್ರದಾಯಿಕ ಇಂಧನ ಬಳಸುವ ದ್ವಿಚಕ್ರ ವಾಹನಗಳ ಸೇವೆಯನ್ನು ಪೂರ್ತಿಯಾಗಿ ನಿಲ್ಲಿಸಿ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಮಾತ್ರ ಸೇವೆಗೆ ಲಭ್ಯವಾಗಿಸುವ ಗುರಿ ಹೊಂದಿದೆ.
ಕೋವಿಡ್ ವೇಳೆಯನ್ನು ನಮಗೆ ಪ್ರಯೋಜನವಾಗುವಂತೆ ಬಳಸಿಕೊಂಡೆವು. ಇವಿ ಗಳ ಬಳಕೆಗೆ ವೇಗ ನೀಡುವ ಕೆಲಸ ಮಾಡಿದೆವು ಎಂದು ಕಂಪನಿ ಸಿಇಒ ವಿವೇಕಾನಂದ ಹಳ್ಳೆಕೆರೆ ಹೇಳಿದ್ದಾರೆ. ಬೌನ್ಸ್ ಸೇವೆ ಪಡೆಯುವವರ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬರುತ್ತಿದೆ. ಬೇಡಿಕೆ ಕೋವಿಡ್ ಮೊದಲಿನ ಸ್ಥಿತಿಗೆ ಹೋಲಿಸಿದರೆ, ಶೇ. 35ರಷ್ಟಿದೆ ಎಂದು ಕಂಪನಿ ತಿಳಿಸಿದೆ. ಬೆಂಗಳೂರು, ಹಾಸನ, ಮೈಸೂರು ಮತ್ತು ವಿಜಯವಾಡಗಳಲ್ಲಿ ಕಂಪನಿಯ ಸೇವೆ ಪುನರಾರಂಭ ಆಗಿದೆ. ಕೋವಿಡ್‌ಗೆ ಮುನ್ನ ಪ್ರತಿದಿನ 1.30 ಲಕ್ಷ ಸವಾರಿಗಳು ಆಗುತ್ತಿದ್ದವು.
Courtesyg: Google (photo)