ಟಾಟಾ ಸನ್ಸ್ ಕಂಪನಿ ಏರ್ ಇಂಡಿಯಾ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಕಂಪನಿಯನ್ನು ಆರಂಭಿಸಿದವರು ಉದ್ಯಮಿ ಜೆ.ಆರ್.ಡಿ.ಟಾಟಾ. 1953ರಲ್ಲಿ ಕೇಂದ್ರ ಸರ್ಕಾರ ಕಂಪನಿಯ ಬಹುಪಾಲು ಷೇರುಗಳನ್ನು ಖರೀದಿಸಿ, ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಸರಿ ಸುಮಾರು ಏಳು ದಶಕಗಳ ನಂತರ ಟಾಟಾ ಸಮೂಹ ಮತ್ತೊಮ್ಮೆ ಏರ್ ಇಂಡಿಯಾವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಯತ್ನಕ್ಕೆ ಮುಂದಾಗಿದೆ. ಟಾಟಾ ಸಮೂಹ ವಿಸ್ತಾರಾ ವಿಮಾನಯಾನ ಕಂಪನಿಯನ್ನು ನಡೆಸುತ್ತಿದೆ.
ಏರ್ ಇಂಡಿಯಾ ಮಾರಾಟಕ್ಕೆ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ವರ್ಷದ ಆರಂಭದಲ್ಲಿ ಏರ್‌ಇಂಡಿಯಾ ಹಾಗೂ ಅಂತಾರಾಷ್ಟಿçÃಯ ಮಾರ್ಗಗಳಲ್ಲಿ ಕಡಿಮೆ ವೆಚ್ಚದ ವಿಮಾನಯಾನ ಸೇವೆ ಒದಗಿಸುವ ಏರ್ ಇಂಡಿಯಾ ಎಕ್ಸ್ಪ್ರೆಸ್‌ನಲ್ಲಿನ ಶೇ.100ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಬಿಡ್ ಆಹ್ವಾನಿಸಿತ್ತು. ಏತನ್ಮಧ್ಯೆ ಏರ್‌ಇಂಡಿಯಾದ 209 ನೌಕರರನ್ನು ಪ್ರತಿನಿಧಿಸುವ ಗುಂಪೊAದು ಖರೀದಿಗೆ ಬಿಡ್ ಸಲ್ಲಿಸಿದೆ. ಮಾರ್ಚ್ 31, 2019ಕ್ಕೆ ಏರ್ ಇಂಡಿಯಾದ ಸಾಲ 60,074 ಕೋಟಿ ರೂ.ಆಗಿತ್ತು. ಕಂಪನಿಯನ್ನು ಖರೀದಿಸುವವರು ಇದರಲ್ಲಿ 23,286 ಕೋಟಿ ರೂ. ವಹಿಸಿಕೊಳ್ಳಬೇಕು. ಉಳಿದ ಸಾಲ ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿ.ಎಂಬ ಕಂಪನಿಗೆ ವರ್ಗಾವಣೆಆಗುತ್ತದೆ.
Courtesyg: Google (photo)