ವಿದ್ಯುತ್‌ಚಾಲಿತ ಸ್ಕೂಟರ್ ತಯಾರಿಕೆ ಘಟಕ ಆರಂಭಿಸಲು ತಮಿಳುನಾಡು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಓಲಾ ತಿಳಿಸಿದೆ. ಘಟಕಕ್ಕೆ ಓಲಾ 2.400 ಕೋಟಿ ರೂ. ಹೂಡಿಕೆ ಮಾಡಲಿದ್ದು, ಇದು ವಿಶ್ವದ ಅತಿ ದೊಡ್ಡ ಇವಿ ತಯಾರಿಕೆ ಘಟಕ ಆಗಲಿದೆ. ರಾಜ್ಯದ ಗಡಿ ಭಾಗದ ಹೊಸೂರಿನಲ್ಲಿ ಸ್ಥಾಪನೆಯಾಗಲಿರುವ ಘಟಕ 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದ್ದು, ವಾರ್ಷಿಕ 20 ಲಕ್ಷ ಸ್ಕೂಟರ್ ಉತ್ಪಾದಿಸುವ ಗುರಿ ಹೊಂದಿದೆ. ಇದರಿಂದ ಇವಿ ವಾಹನಗಳ ಆಮದು ತಗ್ಗಲಿದೆ. ಸ್ಥಳೀಯ ಉತ್ಪಾದನೆ ಪ್ರಕ್ರಿಯೆಗೆ ಶಕ್ತಿ ತುಂಬಲಿದೆ ಎಂದು ಓಲಾ ಹೇಳಿಕೊಂಡಿದೆ.
Courtesyg: Google (photo)