ಖ್ಯಾತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ(87) ಡಿಸೆಂಬರ್ 14 ರಾತ್ರಿ ನಿಧನರಾಗಿದ್ದಾರೆ. ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು.
1933ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನರಸಿಂಹ, ತಂದೆ ಹಾಗೂ ವಿಜ್ಞಾನ ಲೇಖಕ ಆರ್.ಎಲ್. ನರಸಿಂಹಯ್ಯ ಅವರಿಂದ ಬಾಲ್ಯದಿಂದಲೇ ಪ್ರಭಾವಿತರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ(1953), ಭಾರತೀಯ ವಿಜ್ಞಾನ ಸಂಸ್ಥೆಯಿAದ ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ(1955) ಮಾಡಿ, 1962ರಿಂದ1999ರವರೆಗೆ ಐಐಎಸ್ಸಿಯ ಏರೋಸ್ಪೇಸ್ ಎಂಜಿನಿಯರಿಂಗ್ನ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್ಎಎಲ್)ದ ನಿರ್ದೇಶಕ(1984-1993), 2000ರಿಂದ ೨೦೧೪ರವರೆಗೆ ಬೆಂಗಳೂರಿನ ಜೆಎನ್ಸಿಎಎಸ್ಆರ್ನ ಎಂಜಿನಿಯರಿಂಗ್ ಮೆಕ್ಯಾನಿಕ್ಸ್ ವಿಭಾಗದ ಅಧ್ಯಕ್ಷ, 1992-1994 ರವರೆಗೆ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇಸ್ರೊ ಮತ್ತು ನಿಯಾಸ್ಗೂ ಅವರ ಸೇವೆ ಸಂದಿದೆ. ರಾಜೀವ್ ಗಾಂಧಿ ಅವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದ ಅವರು, ಜನಸಾಮಾನ್ಯರಿಗೂ ವಿಮಾನ ಸಂಚಾರ ಕೈಗೆಟಕಬೇಕು ಹಾಗೂ ಸಣ್ಣ ನಗರಗಳ ನಡುವೆ ವಿಮಾನ ಸಂಚಾರ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ವಿಮಾನಗಳ ವೆಚ್ಚ ಕಡಿತ ಮಾಡುವ ಕುರಿತು ಸಂಶೋಧನೆ ನಡೆಸಿದ್ದರು. ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
Courtesyg: Google (photo)