ಇತ್ತೀಚೆಗೆ ಆರಂಭವಾಗಿರುವ ವಾಟ್ಸ್ ಆ್ಯಪ್ ಪಾವತಿ ಸೌಲಭ್ಯವನ್ನು ಜನಪ್ರಿಯಗೊಳಿಸಲು ಫೇಸ್‌ಬುಕ್ ಮುಂದಾಗಿದೆ. ರಾಷ್ಟ್ರೀಯ ಪಾವತಿ ನಿಗಮದಿಂದ ಒಪ್ಪಿಗೆ ಪಡೆದು, ಯುಪಿಐ ಆಧಾರಿತ ಪಾವತಿ ಸೌಲಭ್ಯವನ್ನು ಆರಂಭಿಸಿದೆ. ಭಾರತವು ವಿಶೇಷ ದೇಶ ಎಂದು ಬಣ್ಣಿಸಿರುವ ಫೇಸ್‌ಬುಕ್‌ನ ಸಿಇಒ ಮಾರ್ಕ್ ಝಕರ್‌ಬರ್ಗ್, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ವಾಟ್ಸ್ ಆ್ಯಪ್ ಮೂಲಕವೇ ಹಣ ಕಳುಹಿಸಬಹುದು. ಇದು ಸಂದೇಶ ರವಾನಿಸಿದಷ್ಟೇ ಸುಲಭ ಎಂದು ಹೇಳಿದ್ದಾರೆ. ರಿಲಯನ್ಸ್ ಮಾಲೀಕತ್ವದ ಜಿಯೊ ಪ್ಲಾಟ್‌ಫಾರ್ಮ್ಸ್ನಲ್ಲಿ ಫೇಸ್‌ಬುಕ್ 43.574 ಕೋಟಿ ರೂ. ಹೂಡಿಕೆ ಮಾಡುವುದಾಗಿ ಏಪ್ರಿಲ್‌ನಲ್ಲಿ ಪ್ರಕಟಿಸಿದೆ.
Courtesyg: Google (photo)