ವಿದ್ಯಾಗಮ ಪರಿಷ್ಕರಿಸಿ ಅನುಷ್ಠಾನ

ಕೋವಿಡ್‌ನಿಂದ ಶಾಲಾರಂಭ ವಿಳಂಬವಾದ್ದರಿಂದ ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುರಕ್ಷತಾ ಕ್ರಮಗಳೊಂದಿಗೆ ಮರುಅನುಷ್ಠಾನಕ್ಕೆ ಸರ್ಕಾರ ನಿರ್ಧರಿಸಿದೆ. ಆ.೮ರಿಂದ ಆರಂಭಗೊಂಡ ಯೋಜನೆಯನ್ನು ಎರಡು ದಿನಗಳ ಬಳಿಕ ಸ್ಥಗಿತಗೊಳಿಸಲಾಗಿತ್ತು. ವಿದ್ಯಾಗಮದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವುದು, ಹಳ್ಳಿಗಳಲ್ಲಿ ಪೋಷಕರೊಂದಿಗೆ ಕೆಲಸಗಳಿಗೆ ತೆರಳುವುದು, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿಯಂಥ ಪಿಡುಗುಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಲಭ್ಯ ಶಿಕ್ಷಕರು ಮತ್ತು ಕೊಠಡಿಗಳ ಸಂಖ್ಯೆಗೆ ಅನುಸಾರವಾಗಿ ೧೫-೨೦ ಮಕ್ಕಳನ್ನು ಒಂದು  ತಂಡವಾಗಿ ರಚಿಸಲಾಗುವುದು. ಸ್ಥಳೀಯ ಸಂಸ್ಥೆಗಳು ಸ್ಯಾನಿಟೈಸೇಷನ್ ಜವಾಬ್ದಾರಿ ತೆಗೆದುಕೊಳ್ಳಲಿವೆ. ಕುಡಿಯುವ ನೀರನ್ನು ಮನೆಯಿಂದಲೇ ತರಲು ಸಲಹೆ ನೀಡಲಾಗುವುದು. ಕಟ್ಟುನಿಟ್ಟು ಕ್ರಮಗಳೊಂದಿಗೆ ಯೋಜನೆ ಮರುಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು. ಜಿಪಂ ಸಿಇಒ ಕಾರ್ಯಕ್ರಮದ ಉಸ್ತುವಾರಿ ಹಾಗೂ ಇಲಾಖೆಯ ಉಪ ನಿರ್ದೇಶಕರು ಅನುಷ್ಠಾನಾಧಿಕಾರಿ ಆಗಿರುತ್ತಾರೆ. ವಿದ್ಯಾಗಮ ತರಗತಿಗಳನ್ನು ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ ೩ ತರಗತಿ ನಡೆಸಲಾಗುವುದು. ದಿನಕ್ಕೆ ೭ ರಿಂದ ೮ ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ಬರಲು ಸೂಚಿಸಲಾಗುವುದು ಎಂದು ಹೇಳಿದರು.

ಕಡಿಮೆ ಮಕ್ಕಳು ಶಾಲಾವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಪಾಠ ಕೇಳುತ್ತಾರೆ. ತಜ್ಞರ ಸಮಿತಿಯ ಶಿಫಾರಸಿನನ್ವಯ ತರಗತಿಗಳು ನಡೆಯಲಿದ್ದು, ಪ್ರಮಾಣಿತ ಕಾರ್ಯಾಚರಣೆ  ವಿಧಾನ ಅನುಸರಿಸಲಾಗುವುದು. ಪೋಷಕರ ಕಡ್ಡಾಯ ಅನುಮತಿ, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆನ್ಲೈನ್, ಚಂದನವಾಹಿನಿಯ ಪಾಠಗಳೂ ಮುಂದುವರಿಯಲಿವೆ. ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆ, ಸ್ಯಾನಿಟೈಸರ್, ಸೋಪ್ ಬಳಕೆ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top