ನವೀಕರಿಸಬಹುದಾದ ಇಂಧನದಿAದ ಬಡತನ ನಿವಾರಣೆ ಸಾಧ್ಯವಾಗಲಿದೆ. ಇದನ್ನು ಆರೋಗ್ಯ, ಶಿಕ್ಷಣ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಮಹಾ ನಿರ್ದೇಶಕ ಉಪೇಂದ್ರ ತ್ರಿಪಾಠಿ ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಇಂಧನದ ಆವಿಷ್ಕಾರಕ್ಕೆ ವೇದಿಕೆ ಒದಗಿಸಲು ಸೆಲ್ಕೊ ಫೌಂಡೇಷನ್ ಪ್ರಾರಂಭಿಸಿರುವ ಗ್ಲೋಬಲ್ ಎಸ್ಡಿಜಿ೭ ಹಬ್ಸ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಧನಕ್ಕೆ ಬೇಡಿಕೆ ದಿನೇದಿನೇ ಹೆಚ್ಚುತ್ತಿದ್ದು, ಕೆಲವೇ ವರ್ಷಗಳಲ್ಲಿ ಪಳೆಯುಳಿಕೆ ಇಂಧನ ಬರಿದಾಗಲಿದೆ. ಗ್ರಾಮೀಣ ಬಡಜನರನ್ನು ಮೇಲಕ್ಕೆತ್ತುವ ಯೋಜನೆಗಳಿಗೆ ಬೆಂಬಲ ನೀಡಬೇಕಿದೆ. ನವೀಕರಿಸಬಹುದಾದ ಇಂಧನ ನಾನಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ತಂತ್ರಜ್ಞಾನದಿAದಷ್ಟೇ ಇದನ್ನು ಜನರಿಗೆ ತಲುಪಿಸಲು ಸಾಧ್ಯವಿಲ್ಲ. ಬಳಕೆ ಬಗ್ಗೆ ತರಬೇತಿ ಸೇರಿದಂತೆ ನಾನಾ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸೇರಿದಂತೆ ಹಲವು ಅಗತ್ಯ ಮೂಲಸೌಕರ್ಯಗಳಿಲ್ಲ. ಅಂಥ ಕಡೆ ಸೌರಶಕ್ತಿಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸಿ, ಅಲ್ಲಿನವರನ್ನು ಮುನ್ನೆಲೆಗೆ ತರ ಬೇಕು ಎಂದು ಹೇಳಿದರು.
Courtesyg: Google (photo)