ಷೇರು ಮಾರುಕಟ್ಟೆ ಸೂಚ್ಯಂಕಗಳು ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆ ಮಾತ್ರವಲ್ಲದೆ, ಮುಂಬೈ ಷೇರು ಪೇಟೆಯಲ್ಲಿ ಕೂಡ ಭರ್ಜರಿ ವಹಿವಾಟು ನಡೆಯಿತು. ಬಿಎಸ್ಇ ಸೆನ್ಸೆಕ್ಸ್ 403 ಅಂಶ ಏರಿಕೆ ಕಂಡು, ದಿನದ ಅಂತ್ಯಕ್ಕೆ 46,666 ಹಾಗೂ ನಿಫ್ಟಿ ಸೂಚ್ಯಂಕ 114 ಅಂಶ ಜಿಗಿದು, 13,682ರಲ್ಲಿ ಕೊನೆಗೊಂಡಿತು. ಬಿಎಸ್ಇ ಮತ್ತು ನಿಫ್ಟಿ ಗುರುವಾರದ ಕೊನೆಯಲ್ಲಿ ದಾಖಲೆಯ ಮಟ್ಟ ತಲುಪಿವೆ. ಎಚ್ಡಿಎಫ್ಸಿ, ಒಎನ್ಜಿಸಿ, ಭಾರ್ತಿ ಏರ್ಟೆಲ್, ಏಷ್ಯನ್ ಪೇಂಟ್ಸ್, ಟೈಟಾನ್, ಟಿಸಿಎಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡವು.
ದೇಶಿ ಷೇರು ಮಾರುಕಟ್ಟೆಗಳಲ್ಲಿ ಗೂಳಿಯ ಓಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ಒಳ್ಳೆಯ ವಹಿವಾಟು, ದೇಶಿ ಮಾರುಕಟ್ಟೆಗಳ ನೆರವಿಗೆ ಬಂತು. ಅಮೆರಿಕದಲ್ಲಿ ಅರ್ಥ ವ್ಯವಸ್ಥೆಯ ಚೇತರಿಕೆಯಲ್ಲದೆ, ಮತ್ತೋಮದು ಪ್ಯಾಕೇಜ್ ಘೋಷಣೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಕೊರೊನಾ ಲಸಿಕೆ ತೃಪ್ತಿಕರ ಮುನ್ನಡೆ ಕಂಡುಬAದಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ನ ಬಿನೋದ್ ಮೋದಿ ಹೇಳಿದ್ದಾರೆ.
Courtesyg: Google (photo)