ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು ಶೇ.42ರಷ್ಟು ಬೆಳವಣಿಗೆ ದಾಖಲೆಯಾಗಿದೆ. ಅಕ್ಟೋಬರ್‌ನಲ್ಲಿ ಒಟ್ಟು 2.1 ಕೋಟಿ ಸ್ಮಾರ್ಟ್ಫೋನ್‌ಗಳ ಮಾರಾಟವಾಗಿದೆ. ತಿಂಗಳೊದರಲ್ಲಿ ಆಗಿರುವ ಎರಡನೆಯ ಅತಿಹೆಚ್ಚಿನ ಮಾರಾಟ ಪ್ರಮಾಣವಾಗಿದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 2.3 ಕೋಟಿ ಸ್ಮಾರ್ಟ್ಫೋನ್‌ಗಳ ಮಾರಾಟವಾಗಿದ್ದು. ಆ ತಿಂಗಳ ಮಾರಾಟವನ್ನು ಹೊರತುಪಡಿಸಿದರೆ, ಅಕ್ಟೋಬರ್‌ನಲ್ಲಿ ಆಗಿರುವ ಮಾರಾಟ ಎರಡನೆಯ ಅತಿಹೆಚ್ಚಿನ ಪ್ರಮಾಣವಾಗಿದೆ. ಒಟ್ಟು ಮಾರಾಟದಲ್ಲಿ ಆನ್‌ಲೈನ್ ಮಾರುಕಟ್ಟೆಗಳ ಪಾಲು ಶೇ.51ರಷ್ಟಿದೆ. ಆನ್‌ಲೈನ್ ಮಾರುಕಟ್ಟೆಗಳು ಸ್ಮಾರ್ಟ್ಫೋನ್ ಮಾರಾಟದ ವಿಚಾರದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. ೫೩ರಷ್ಟು ಬೆಳವಣಿಗೆ ದಾಖಲಿಸಿವೆ.
ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು ಇಂದಿಗೂ 50ರಿಂದ 70 ನಗರಗಳಲ್ಲಿ ಕೇಂದ್ರೀಕೃತ ಆಗಿದೆ. ಸ್ಮಾರ್ಟ್ಫೋನ್ ಉದ್ಯಮವು ಕೆಳಹಂತದ ನಗರಗಳ ಮೇಲೆ ಹೆಚ್ಚಿನ ಗಮನ ನೀಡಬೇಕು. ಕೈಗೆಟಕುವ ದರದಲ್ಲಿ ಸ್ಮಾರ್ಟ್ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಬೇಕು ಎಂದು ಐಡಿಸಿ ಸಂಸ್ಥೆಯ ಸಹ ಸಂಶೋಧನಾ ವ್ಯವಸ್ಥಾಪಕಿ ಉಪಾಸನಾ ಜೋಷಿ ಹೇಳಿದ್ದಾರೆ.
Courtesyg: Google (photo)