ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ನ 3,898 ಶಾಖೆಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ. ಏ.1, 2019ರಿಂದ ಜಾರಿಗೆ ಬರುವಂತೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡಲಾಗಿದೆ. ಕೋವಿಡ್ ಸವಾಲಿನ ಹೊತ್ತಿನಲ್ಲೇ ಬ್ಯಾಂಕ್ ಶಾಖೆಗಳ ವಿಲೀನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಗ್ರಾಹಕರ ಐದು ಕೋಟಿಗಿಂತ ಹೆಚ್ಚಿನ ಖಾತೆಗಳ ವಿವರಗಳನ್ನು ವಿಲೀನ ಮಾಡಲಾಗಿದೆ. ಜತೆಗೆ, ಎಟಿಎಂ, ಕ್ರೆಡಿಟ್ ಕಾರ್ಡ್ ಹಾಗೂ ಪಿಒಎಸ್ ಯಂತ್ರಗಳನ್ನು ವಿಲೀನ ಮಾಡಲಾಗಿದೆ. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ನೀಡಿದ್ದ ಡೆಬಿಟ್ ಕಾರ್ಡ್ಗಳನ್ನು ಅವಧಿ ಪೂರ್ಣಗೊಳ್ಳುವವರೆಗೆ ಬಳಸಬಹುದು ಎಂದು ಬ್ಯಾಂಕ್ ಆಫ್ ಬರೋಡಾದ ಸಿಇಒ ಸಂಜೀವ್ ಛಡ್ಡಾ ಹೇಳಿದ್ದಾರೆ.
Courtesyg: Google (photo)