ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳು 16,728 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಜಿಲ್ಲಾ ಮಟ್ಟದ ವ್ಯಾಪಾರ ಸುಧಾರಣೆ ಕ್ರಿಯಾಯೋಜನೆ ಸೇರಿದಂತೆ ಹಲವು ಹೂಡಿಕೆಸ್ನೇಹಿ ಕ್ರಮಗಳನ್ನು ಕೈಗೊಂಡ ರಾಜ್ಯಗಳಿಗೆ ಹೆಚ್ಚುವರಿ ಸಾಲ ಮಂಜೂರು ಮಾಡಲು ಸಚಿವಾಲಯ ಮೇ ತಿಂಗಳಲ್ಲಿ ನಿರ್ಧರಿಸಿತ್ತು. ಮುಕ್ತ ಮಾರುಕಟ್ಟೆ ಮೂಲಕ 16,728 ಕೋಟಿ ರೂ. ಸಾಲ ಪಡೆಯಲು ಅನುಮತಿ ನೀಡಿದೆ.
ಹೆಚ್ಚುವರಿ ಸಾಲ ಪಡೆಯಲು ರಾಜ್ಯಗಳು ಫೆ.2020ರೊಳಗೆ ಒಂದು ದೇಶ–ಒಂದು ಪಡಿತರ ಯೋಜನೆಯ ಅನುಷ್ಠಾನವಲ್ಲದೆ, ನಗರ ಸ್ಥಳೀಯ ಸಂಸ್ಥೆ ಹಾಗೂ ವಿದ್ಯುತ್ ವಲಯದಲ್ಲಿ ಸುಧಾರಣೆ ಹಾಗೂ ಮುಕ್ತ ವ್ಯಾಪಾರ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ. 10 ರಾಜ್ಯಗಳು ಒಂದು ದೇಶ–ಒಂದು ಪಡಿತರ ಯೋಜನೆ ಹಾಗೂ ಐದು ರಾಜ್ಯಗಳು ಮುಕ್ತ ವ್ಯಾಪಾರದ ವಾತಾವರಣ ನಿರ್ಮಿಸಿ ವೆ ಹಾಗೂ ಎರಡು ರಾಜ್ಯಗಳು ನಗರ ಸ್ಥಳೀಯ ಸಂಸ್ಥೆಗಳ ಸುಧಾರಣೆ ಕೈಗೊಂಡಿವೆ ಎಂದು ಸಚಿವಾಲಯ ಹೇಳಿದೆ.
Courtesyg: Google (photo)