ರಾಜ್ಯದ ವಿವಿಧೆಡೆ ಎಲೆಕ್ಟ್ರಾನಿಕ್ ಏವಿಯಾನಿಕ್ಸ್, ಎಲೆಕ್ಟ್ರಿಕ್ ವಾಹನ ಮತ್ತು ಅವುಗಳ ಬಿಡಿಭಾಗ ಉತ್ಪಾದನೆಗೆ 26.659 ಕೋಟಿ ರೂ. ಹೂಡಿಕೆಯ 5 ಯೋಜನೆಗಳಿಗೆ ಮುಖ್ಯಮಂತ್ರಿ ನೇತೃತ್ವದ ಸಮಿತಿ ಒಪ್ಪಿಗೆ ನೀಡಿದೆ. ಬೆಂಗಳೂರಿನ ಏರೋಸ್ಪೇಸ್ ಪಾರ್ಕ್ನ 36.5 ಎಕರೆ ಪ್ರದೇಶದಲ್ಲಿ ಬೋಯಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಲೆಕ್ಟ್ರಾನಿಕ್ ಏವಿಯಾನಿಕ್ಸ್ ಉತ್ಪಾದನೆ ಮತ್ತು ಜೋಡಣೆಗೆ 1.152 ಕೋಟಿ ರೂ.ಹೂಡಿಕೆ ಮಾಡಲಿದೆ. ಹುಬ್ಬಳ್ಳಿ- ಧಾರವಾಡದಲ್ಲಿ ಎಲೆಸ್ಟ್ ಪ್ರೈ.ಲಿ . 85 ಎಕರೆ ಪ್ರದೇಶದಲ್ಲಿ ಎಲೆಕ್ಟಿçಕ್ ವಾಹನ ಉತ್ಪಾದನೆಗೆ 14.255 ಕೋಟಿ ರೂ. ಹಾಗೂ 88 ಎಕರೆ ಪ್ರದೇಶದಲ್ಲಿ ಲಿಥಿಯಂ ಅಯಾನ್ ಸೆಲ್ ಮತ್ತು ಬ್ಯಾಟರಿಗಳ ಉತ್ಪಾದನೆಗೆ 6.339 ಕೋಟಿ ರೂ. ಹೂಡಿಕೆ ಮಾಡಲಿದೆ. ಹ್ಯುನೆಟ್ ಕಂಪನಿ ಚಿಕ್ಕಬಳ್ಳಾಪುರದಲ್ಲಿ ಇವಿ ಬಿಡಿಭಾಗಗಳ ತಯಾರಿಕೆ, ಲಿಥಿಯಂ ಬ್ಯಾಟರಿ ಉತ್ಪಾದನೆ ಘಟಕಕ್ಕೆ 1.825 ಕೋಟಿ ರೂ., ಮಿರಾಕ್ಯುಲಂ ಗ್ರೀನ್ ಪವರ್ ಜಗಳೂರಿನಲ್ಲಿ ಪವನ, ಸೌರ ವಿದ್ಯುತ್ ಯೋಜನೆಗೆ 1.290 ಕೋಟಿ ರೂ. ಹಾಗೂ ಸನಾಲಿ ಪವರ್ ಪವನ, ಸೌರ ವಿದ್ಯುತ್ ಯೋಜನೆಗೆ 2.950ಕೋಟಿರೂ.ಬಂಡವಾಳ ಹೂಡಲಿವೆ.