1918 ಕ್ಕಿಂತ ಹಿಂದಿನ ಸಾಂಕ್ರಾಮಿಕ ರೋಗಗಳ ಕಾಯಿದೆಯ ಪರಿಷ್ಕರಣೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಕ್ಕೆ ರಾಷ್ಟ್ರೀಯ ಯೋಜನೆ, ಪಿಡುಗಿನ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಯಂತ್ರಣಕ್ಕೆ ಕಾನೂನು ಸೇರಿದಂತೆ ಗೃಹ ಇಲಾಖೆಗೆ ಸಂಬAಧಿಸಿದ ಸಂಸದೀಯ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಸಂಸದ ಆನಂದ್ ಶರ್ಮಾ(ಕಾಂಗ್ರೆಸ್)ಅವರ ನೇತೃತ್ವದ ಸಮಿತಿಯು ಕೋವಿಡ್ ನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿತು. ಏಕಾಏಕಿ ಲಾಕ್‌ಡೌನ್‌ನಿಂದ ಹಿಂದೆAದೂ ಇಲ್ಲದ ಬಿಕ್ಕಟ್ಟು ಉಂಟಾಯಿತು. ಆದರೆ, ಮೊದಲನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆಯ ಲಕ್ಷಣ ಗೋಚರಿಸಿದೆ ಎಂದು ಕೋವಿಡ್ ನಿರ್ವಹಣೆ ಹಾಗೂ ರಾಜ್ಯ ಸರ್ಕಾರಗಳೊಡನೆ ಸಮನ್ವಯ ಎನ್ನುವ ವರದಿ ಹೇಳಿದೆ.
ಕಳೆದ ಮಾರ್ಚ್ನಲ್ಲಿ ಸರ್ಕಾರ ಅನುಸರಿಸಿದ ಕೋವಿಡ್ ಪರೀಕ್ಷಾ ವಿಧಾನವನ್ನು ಪ್ರಶ್ನಿಸಿರುವ ಸಮಿತಿ, ವಿದೇಶದಿಂದ ಆಗಮಿಸಿದವರ ದೇಹದ ತಾಪಮಾನ ಪರೀಕ್ಷಿಸಲಾಯಿತೇ ಹೊರತು ಪತ್ತೆ ಹೆಚ್ಚುವ ಪರೀಕ್ಷೆಗಳನ್ನುನಡೆಸಿಲ್ಲ. ಆದ್ದರಿಂದ ಲಕ್ಷಣರಹಿತ ಕೋವಿಡ್ ಸೋಂಕಿತರು ಹಾಗೂ ಜ್ವರ ಇಳಿಸಲು ಮಾತ್ರೆ ತೆಗೆದುಕೊಂಡಿದ್ದವರು ತಪ್ಪಿಕೊಂಡಿದ್ದಾರೆ. ಅವರಿಂದಲೇ ಸೋಂಕು ವ್ಯಾಪಿಸಿದೆ ‘ ಎಂದು ಸಮಿತಿ ಹೇಳಿದೆ. ವಲಸೆ ಕಾರ್ಮಿಕರ ಸಂಖ್ಯೆ ಎಷ್ಟು ಎನ್ನುವ ದತ್ತಾಂಶ ಅಗತ್ಯವಿದೆ. ಭವಿಷ್ಯದಲ್ಲಿ ಪಿಡುಗಿನ ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯಕ್ಕೆ ರಾಷ್ಟ್ರೀಯ ಯೋಜನೆ ಬೇಕಿದೆ. ಕೆಲವು ಖಾಸಗಿ ಆಸ್ಪತ್ರೆಗಳು ಹಾಸಿಗೆಗಳನ್ನು ಮಾರಾಟ ಮಾಡುತ್ತಿದ್ದ ವರದಿಗಳ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾಯ್ದೆ ಅಗತ್ಯವಿದೆ. ಪಿಡುಗಿನ ವೇಳೆ ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಔಷಧ ಲಭ್ಯವಾಗುವಂತೆ ಸರ್ಕಾರನೋಡಿಕೊಳ್ಳಬೇಕು ಎಂದು ಸಮಿತಿ ಹೇಳಿದೆ.
Courtesyg: Google (photo)