ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯುಪಿಐ ವಹಿವಾಟಿನಲ್ಲಿ ಹೆಚ್ಚು ಯಶಸ್ಸು ದಾಖಲಿಸಿದೆ ಎಂಬುದನ್ನು ರಾಷ್ಟ್ರೀಯ ಪಾವತಿ ನಿಗಮದ ವರದಿ ಹೇಳಿದೆ. ಪಿಪಿಬಿಎಲ್‌ನಲ್ಲಿ ಯುಪಿಐ ಪಾವತಿ ವಿಫಲವಾಗಿದ್ದು ಅತ್ಯಂತ ಕಡಿಮೆ. ಇನ್ನಿತರ ಬ್ಯಾಂಕ್‌ಗಳ ಮೂಲಕ ನಡೆದ ಪಾವತಿಗಳಲ್ಲಿ ಶೇ.1ರಷ್ಟು ವೈಫಲ್ಯ ಇದ್ದರೆ, ಪಿಪಿಬಿಎಲ್‌ನಲ್ಲಿ ಆ ಪ್ರಮಾಣ ಶೇ.0.02ರಿಂದ ಶೇ.೦.೦4 ಮಾತ್ರ. ಇದಕ್ಕೆ ನಮ್ಮ ತಾಂತ್ರಿಕ ಮೂಲಸೌಕರ್ಯದ ಶ್ರೇಷ್ಠತೆ ಕಾರಣ ಎಂದು ಪಿಪಿಬಿಎಲ್ ಹೇಳಿದೆ.ಬೇರೆ ಬ್ಯಾಂಕ್‌ಗಳ ಗ್ರಾಹಕರು ಯುಪಿಐ ವಹಿವಾಟನ್ನು ಅದೇ ಬ್ಯಾಂಕ್‌ನ ಆ್ಯಪ್ ಮೂಲಕ ನಡೆಸುವುದು ಕಡಿಮೆ. ಆದರೆ, ಪಿಪಿಬಿಎಲ್ ಗ್ರಾಹಕರು ಪೇಟಿಎಂ ಮೂಲಕವೇ ವಹಿವಾಟು ನಡೆಸುತ್ತಾರೆ. ಪಿಪಿಬಿಎಲ್ ಈಗಾಗಲೇ 10 ಕೋಟಿ ಯುಪಿಐ ವಿಳಾಸಗಳನ್ನು ಹೊಂದಿದೆ ಎಂದು ತಿಳಿಸಿದೆ.
Courtesyg: Google (photo)