ಹೊಸ ವೈರಸ್ ವೇಗವಾಗಿ ಹರಡಲಿದ್ದು, ಅಷ್ಟೇನೂ ಅಪಾಯಕಾರಿಯಲ್ಲ. ಆದ್ದರಿಂದ, ಶಾಲೆಗಳನ್ನು ಪ್ರಾರಂಭಿಸಬಹುದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ. ಡಾ.ಎಂ.ಕೆ.ಸುದರ್ಶನ್ ನೇತೃತ್ವದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಸದಸ್ಯರು ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು. ಸಮಿತಿ ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಹೊಸ ಕೋವಿಡ್ ವಿದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಸೋಂಕಿನ ಲಕ್ಷಣ, ಚಿಕಿತ್ಸೆಯಲ್ಲಿ ವ್ಯತ್ಯಾಸವಿಲ್ಲ. ಹರಡುವಿಕೆ ತಡೆಯಬೇಕಿದ್ದು, ಜನ ಜಾಗೃತರಾಗಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಶಾಲೆಗಳನ್ನು ಪ್ರಾರಂಭಿಸಬಹುದು. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆಚರಣೆ ವೇಳೆ ಜನ ಗುಂಪುಗೂಡದAತೆ ನೋಡಿಕೊಳ್ಳಬೇಕು ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟರು. ಲಕ್ಷಣಗಳಿಂದ ಇದು ಯಾವ ವೈರಾಣು ಎಂದು ಪತ್ತೆ ಮಾಡಲು ಸಾಧ್ಯವಿಲ್ಲ. ವಿಶೇಷ ಪರೀಕ್ಷೆಯಿಂದ ಮಾತ್ರ ತಿಳಿಯುತ್ತದೆ. ಫ್ಲೂ ವೈರಾಣು ಪ್ರತಿ ವರ್ಷ ಸ್ವರೂಪ ಬದಲಿಸುವುದನ್ನು ನೋಡುತ್ತಿದ್ದೇವೆ. ವೈರಾಣು ತಡೆಗೆ ಕ್ವಾರಂಟೈನ್ ಮತ್ತಿತರ ನಿರ್ಬಂಧಗಳನ್ನು ಕಟ್ಟುನಿಟ್ಟು ಪಾಲನೆ ಮಾಡಬೇಕು ಎಂದು ಸದಸ್ಯರು ಹೇಳಿದ್ದಾರೆ.
Courtesyg: Google (photo)