ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಮಧ್ಯಮ ದೂರದ ಕ್ಷಿಪಣಿ(ಎಂಆರ್‌ಎಸ್‌ಎಎಂ) ಯನ್ನು ಒಡಿಶಾದ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಇಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಮಧ್ಯಾನ್ಹ ಕ್ಷಿಪಣಿಯನ್ನು ಉಡಾಯಿಸಿದ್ದು, ಅದು ಗುರಿ ನಿಖರವಾಗಿ ತಲುಪಿದೆ. ಆಕಾಶಕ್ಕೆ ಹಾರಿಸಿದ್ದ ಬನ್ಶೀ ಹೆಸರಿನ ಮಾನವರಹಿತ ವೈಮಾನಿಕ ವಾಹನಕ್ಕೆ ಕ್ಷಿಪಣಿ ಅಪ್ಪಳಿಸಿದೆ. ಡಿಆರ್‌ಡಿಒ ಹಾಗೂ ಇಸ್ರೇಲ್ ಏರೊಸ್ಪೇಸ್ ಇಂಡಸ್ಸ್ಟ್ರೀಸ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ಷಿಪಣಿಯನ್ನು ಭಾರತ್ ಡೈನಾಮಿಕ್ ಲಿಮಿಟೆಡ್ ನಿರ್ಮಿಸಿದೆ.
Courtesyg: Google (photo)