ವೀಳ್ಯದೆಲೆ ಮಾರುಕಟ್ಟೆಯಲ್ಲಿ ಶುಕ್ರವಾರ ಒಂದು ಕಟ್ಟು(100 ಎಲೆಗಳು) ದರ 80 ರೂ. ತಲುಪಿತ್ತು. ಕೊರೊನಾ ಬಂದಾಗಿನಿAದಲೂ ಖರೀದಿಸುವವರಿಲ್ಲದೆ ರೈತರು ನಷ್ಟದಲ್ಲಿ ಪರದಾಡುದ್ದರು. ಈ ವರ್ಷ ಬೆಳೆಗಾರರಿಗೆ ಸಿಕ್ಕ ಹೆಚ್ಚಿನ ಬೆಲೆ ಇದು, ಚಳಿಗಾಲವಾಗಿದ್ದು ಕುಡಿಗಳನ್ನು ನೆಲಕ್ಕೆ ಹರಡುವುದರಿಂದ ವೀಳ್ಯದೆಲೆ ಇಳುವರಿ ಕುಸಿಯುತ್ತದೆ. ಈ ಸಮಯದಲ್ಲಿ ಬೆಲೆ ಹೆಚ್ಚಾಗುವುದು ಸರ್ವೇ ಸಾಮಾನ್ಯ ಎನ್ನುತ್ತಾರೆ ಬೆಳೆಗಾರು. ಹಳ್ಳಿ ಮರುಕಟ್ಟೆಗಳಲ್ಲಿ ಮಧ್ಯವರ್ತಿಗಳು ಇಲ್ಲದೇ ರೈತರೇ ನೇರವಾಗಿ ಮಾರಾಟ ಮಾಡುತ್ತಾರೆ. ತುಮಕೂರು, ಶಿರಾ, ಗುಬ್ಬಿ, ಮಧುಗಿರಿ ಸೇರಿದಂತೆ ವಿವಿಧ ಕಡೆಯ ಖರೀದಿದಾರರು ಬರುತ್ತಾರೆ. ಮಾರುಕಟ್ಟೆಗೆ ವೀಳ್ಯದೆಲೆ ಕಟ್ಟುಗಳು ಕಡಿಮೆ ಪ್ರಮಾಣದಲ್ಲಿ ಬಂದಿತ್ತು. ಕೆಲವು ಸ್ಥಳೀಯರು ಬೆಳಿಗ್ಗೆಯೇ ಖರೀದಿದಾರರು ಬರುವ ಮೊದಲೇ ಬೆಳೆಗಾರರಿಂದ ಖರೀದಿ ಮಾಡಿ ಸ್ವಲ್ಪ ಸಮಯದ ನಂತರ ಹೆಚ್ಚಿನ ಬೆಲೆಗೆ ಮಾರಾಟ ಕೂಡ ಮಾಡುತ್ತಾರೆ.
Courtesyg: Google (photo)