ವಿಷಮಶೀತ ಜ್ವರಕ್ಕೆ ದೇಶಿ ಲಸಿಕೆ

ವಿಷಮಶೀತ ಜ್ವರಕ್ಕೆ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ದ್ವಿಪ್ರತಿ ಕಾಯದ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿದೆ. ಸೀರಂ ಇನ್‌ಸ್ಟಿಟ್ಯೂಟ್, ಪಿಎಟಿಎಚ್, ಬಿಲ್ ಮತ್ತು ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದಕ್ಕೆ 10 ವರ್ಷ ತೆಗೆದುಕೊಂಡಿದೆ. ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಿದರು.

ಎರಡು ಪ್ರತಿಕಾಯಗಳನ್ನು ಹೊಂದಿರುವ ಈ ಲಸಿಕೆ ಪಡೆದವರಲ್ಲಿ ವಿಷಮಶೀತ ಜ್ವರಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಿಗೆ ಕೈಗೆಟಕುವ ಬೆಲೆಯಲ್ಲಿ ಲಸಿಕೆ ಒದಗಿಸುವ ಉದ್ದೇಶದ ಈ ಯೋಜನೆ, ಮಕ್ಕಳ ರಕ್ಷಣೆ ಹಾದಿಯಲ್ಲಿ ಮಹತ್ವದ ಮೈಲುಗಲ್ಲು ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ. ಲಸಿಕೆ ವಿಷಮಶೀತ ಜ್ವರಕ್ಕೆ ಸಂಬಂಧಿಸಿದ 10 ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ದ್ವಿಪ್ರತಿ ಕಾಯಗಳು ಇರುವುದರಿಂದ ದೀರ್ಘಾವಧಿವರೆಗೆ ರಕ್ಷಣೆ ನೀಡುವ ಸಾಮರ್ಥ್ಯ ಲಸಿಕೆಗೆ ಇದೆ. ಹೆಚ್ಚು ಪ್ರಮಾಣದಲ್ಲಿ  ತಯಾರಿಸುತ್ತಿರುವುದರಿಂದ ಲಸಿಕೆ ಅತ್ಯಂತ ಕಡಿಮೆ ದರದಲ್ಲಿ ದೊರೆಯಲಿದೆ ಎಂದು ಕಂಪನಿ ಹೇಳಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top