ಕೋವಿಶೀಲ್ಡ್ ಜನವರಿಯಲ್ಲಿ ಬಿಡುಗಡೆ?

ಸ್ವದೇಶದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ, ಕೋವಿಶೀಲ್ಡ್ ಜನವರಿಯಲ್ಲಿ ಬಿಡುಗಡೆ ಆಗಲಿದೆ ಎಂದು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಹೇಳಿದೆ. ಸುಮಾರು 4 ರಿಂದ 5 ಕೋಟಿ ಡೋಸ್ ಲಸಿಕೆ ಸಿದ್ಧವಾಗಿದ್ದು, ವೈದ್ಯಕೀಯ ಪ್ರಯೋಗದ ಫಲಿತಾಂಶದ ವಿವರಗಳನ್ನು ಭಾರತ ಮತ್ತು ಬ್ರಿಟನ್ ಸರ್ಕಾರಗಳಿಗೆ ಸಲ್ಲಿಸಲಾಗಿದೆ. ಔಷಧ ನಿಯಂತ್ರಕರ ಅನುಮೋದನೆಗಾಗಿ ಕಾಯುತ್ತಿದ್ದು, ಕೆಲವೇ ದಿನಗಳಲ್ಲಿ ಒಳ್ಳೆಯ ಸುದ್ದಿ ನಿರೀಕ್ಷಿಸುತ್ತಿದ್ದೇವೆ ಎಂದು ಸಂಸ್ಥೆಯ ಸಿಸಿಒ ಅದಾರ್ ಪೂನಾವಾಲಾ ತಿಳಿಸಿದರು.

ಮಾರ್ಚ್ಗೆ ಉತ್ಪಾದನಾ ಸಾಮರ್ಥ್ಯ 10 ಕೋಟಿ ಹಾಗೂ ಜೂನ್ ವೇಳೆಗೆ 30ಕೋಟಿ ಡೋಸ್ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ. ದೇಶ ನಮ್ಮ ಆದ್ಯತೆ. 2021ರ ಮೊದಲ ಆರು ತಿಂಗಳಲ್ಲಿ ಜಾಗತಿಕವಾಗಿ  ಲಸಿಕೆಯ ಕೊರತೆ ಉಂಟಾಗಬಹುದು. ಆದರೆ, ಇನ್ನಿತರ ಉತ್ಪಾದಕರು ಪೂರೈಕೆ ಆರಂಭಿಸಿದ ಬಳಿಕ, ಆಗಸ್ಟ್-ಸೆಪ್ಟೆಂಬರ್‌ಗೆ ಪರಿಸ್ಥಿತಿ ತಿಳಿಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top