ತುಮಕೂರು ಮತ್ತು ಆಂಧ್ರಪ್ರದೇಶದ ಕೃಷ್ಣಪಟ್ಟಣದಲ್ಲಿ ಕೈಗಾರಿಕೆ ಕಾರಿಡಾರ್ ಸ್ಥಾಪನೆ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ತುಮಕೂರು ಕೈಗಾರಿಕಾ ಪ್ರದೇಶವನ್ನು ಅಂದಾಜು1,702 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 88,500 ಜನರಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆ ಇದೆ. ಕೃಷ್ಣಪಟ್ಟಣದ ಕೈಗಾರಿಕಾ ಪ್ರದೇಶವು2,139ಕೋಟಿರೂ.ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, 98 ಸಾವಿರಜನರಿಗೆಉದ್ಯೋಗಕಲ್ಪಿಸುವ ನಿರೀಕ್ಷೆಇದೆ. ಈ ಎರಡೂ ಕೈಗಾ ರಿಕಾ ಪ್ರದೇಶಗಳಿಗೆ ವಿಶ್ವದರ್ಜೆಯ ಮೂಲ ಸೌಕರ್ಯ, ಬಂದರುಗಳಿಂದ ಸರಕು ಸಾಗಣೆಗೆರಸ್ತೆಮತ್ತುರೈಲು ಸಂಪರ್ಕ ಹಾಗೂ ಇಂಧನ ಪೂರೈಕೆ ಮಾಡಲಾಗುತ್ತದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
Courtesyg: Google (photo)