ಸಾಂಬಾರ ಪದಾರ್ಥಗಳಾದ ಜಾಯಿಕಾಯಿ ಹಾಗೂ ಜಾಯಿಪತ್ರೆ ಬೆಲೆ ಹೆಚ್ಚಳಗೊಂಡಿದೆ. ಕೆಜಿಗೆ 200-220 ರೂ. ಆಸುಪಾಸಿನಲ್ಲಿರುತ್ತಿದ್ದ ಕೋಶಸಹಿತ ಜಾಯಿಕಾಯಿ ಬೆಲೆ, 300ರೂ. ಆಗಿದೆ. ಕೇರಳದಲ್ಲಿ ಕೋಶರಹಿತ ಜಾಯಿಕಾಯಿ ದರ 600 ರೂ.ಮುಟ್ಟಿದೆ. ಜಾಯಿಪತ್ರೆ ಬೆಲೆ ಕೆ.ಜಿ.ಗೆ 700-1,250 ರೂ.ನಿಂದ 1,800-2,000 ರೂ. ಹೆಚ್ಚಳಗೊಂಡಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕಿನ ಕೆಲ ಭಾಗ ಹಾಗೂ ಶಿರಸಿ, ಸಾಗರ ತಾಲೂಕಿನ ಹಲವೆಡೆ ಅಡಕೆ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುವ ಜಾಯಿಕಾಯಿಗೆ ಬೇಡಿಕೆ ಹೆಚ್ಚಿದೆ.
Courtesyg: Google (photo)