ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ-ರೋರಿಚ್‌ಎಸ್ಟೇಟ್‌ನ್ನು ಪಾರಂಪರಿಕ ಜೈವಿಕ ತಾಣವೆಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಶಿಫಾರಸು ಮಾಡಿದೆ. ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ತಜ್ಞರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡ ಡಿ.24 ರಂದು ಎಸ್ಟೇಟ್‌ಗೆ ಭೇಟಿ ನೀಡಿ, ಪರಿಸರ, ಜೀವವೈವಿಧ್ಯ ಕುರಿತು ಸಮೀಕ್ಷೆ ನಡೆಸಿ, ಸಿದ್ಧಪಡಿಸಿದ ವರದಿಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ಸಲ್ಲಿಸಲಾಗಿದೆÀ.
ದೇವಿಕಾರಾಣಿ-ರೋರಿಚ್ ಎಸ್ಟೇಟ್ ರಾಜಧಾನಿಯ ಅದ್ಭುತ ಜೈವಿಕ ಭಂಡಾರವಾಗಿದ್ದು, 2002ರ ಜೀವವೈವಿಧ್ಯ ಕಾಯ್ದೆ ಅಡಿಯಲ್ಲಿ ಪಾರಂಪರಿಕ ತಾಣ ಎಂದು ಘೋಷಿಸಬೇಕು. ಎಸ್ಟೇಟ್‌ಗೆ ಪ್ರವೇಶ ನಿಯಂತ್ರಿಸಬೇಕು. ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಬೇಕು. ಎಸ್ಟೇಟ್ ಸುತ್ತ ಹೊರಗೋಡೆ ನಿರ್ಮಾಣವಾಗಬೇಕು. ಎಸ್ಟೇಟಿನ ಅರಣ್ಯ ಸಂಪತ್ತಿನ ರಕ್ಷಣೆ ಹೊಣೆಯನ್ನು ಅರಣ್ಯ ಇಲಾಖೆಗೆ ವಹಿಸಬೇಕು. ಎಸ್ಟೇಟಿನಲ್ಲಿರುವ ಕೆರೆಯ ಮಾಲಿನ್ಯ ನಿಯಂತ್ರಣ ಮಾಡಬೇಕು. ಎಸ್ಟೇಟ್ ಟ್ರಸ್ಟ್ನಲ್ಲಿ ಪರಿಸರ ತಜ್ಞ ಹಾಗೂ ಜೀವವೈವಿಧ್ಯ ಮಂಡಳಿಯ ಪ್ರತಿನಿಧಿ ಆಹ್ವಾನಿತ ಸದಸ್ಯರಾಗಿರಬೇಕು ಎಂಬ ಅಂಶಗಳನ್ನು ಶಿಫಾರಸು ಒಳಗೊಂಡಿದೆ.
Courtesyg: Google (photo)