ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ಆರನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಜನವರಿ ೪ರಂದು ಚರ್ಚೆ ಮುಂದುವರಿಯಲಿದೆ. ವಿದ್ಯುತ್ ದರ ಹೆಚ್ಚಳ ಹಾಗೂ ಕೃಷಿ ತ್ಯಾಜ್ಯ ದಹಿಸುವ ರೈತರಿಗೆ ದಂಡ ವಿಷಯದಲ್ಲಿ ಸಹಮತ ಏರ್ಪಟ್ಟಿದೆ. ಆದರೆ, ಕೃಷಿ ಮಾರುಕಟ್ಟೆ ಕಾಯ್ದೆಗಳ ರದ್ದು ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಬೇಕೆಂಬ ರೈತರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಸಿಕ್ಕಿಲ್ಲ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಚಿವರಾದ ಪೀಯೂಷ್ ಗೋಯಲ್ ಮತ್ತು ಸೋಮಪ್ರಕಾಶ್ ಹಾಗೂ ರೈತ ಸಂಘಟನೆಗಳ ೪೧ ಪ್ರತಿನಿಧಿಗಳು ಐದು ಗಂಟೆ ಕಾಲ ಚರ್ಚೆ ನಡೆಸಿದರು. ನಾಲ್ಕರಲ್ಲಿ ಎರಡು ವಿಷಯಗಳಲ್ಲಿ ಸಹಮತವಿದೆ. ಉಳಿದ ಎರಡು ವಿಚಾರ ಕುರಿತು ಜ.೪ರಂದು ಚರ್ಚೆ ನಡೆಯಲಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕೆಂಬ ರೈತರ ಬೇಡಿಕೆಗೆ ಸರ್ಕಾರ ಈಗಾಗಲೇ ಸ್ಪಂದಿಸಿದ್ದು, ಲಿಖಿತ ಭರವಸೆ ನೀಡಲು ಸಿದ್ಧವಿದೆ ಎಂದು ಸಚಿವ ತೋಮರ್ ಹೇಳಿದ್ದಾರೆ.
Courtesyg: Google (photo)