ಜಿಯೊದಿಂದ ಜನವರಿಗೆ ಬಂಪರ್ ಕೊಡುಗೆ

ರಿಲಯನ್ಸ್ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್‌ಗಳಿಗೆ ಹೊಸ ವರ್ಷದಿಂದ ಎಲ್ಲ ಕರೆಗಳು ಉಚಿತವಾಗಿ ಲಭ್ಯವಾಗಲಿದೆ ಎಂದು ಜಿಯೊ ಗುರುವಾರ ಪ್ರಕಟಿಸಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನಗಳ ಪ್ರಕಾರದಂತೆ 2021ರ ಜನವರಿ ೧ರಿಂದ ಹೊಸ ಕ್ರಮಗಳನ್ನು ಜಿಯೊ ಅನುಷ್ಠಾನಗೊಳಿಸುತ್ತಿದ್ದು, ಎಲ್ಲ ದೇಶೀಯ ಧ್ವನಿ ಕರೆಗಳ ಮೇಲಿನ ಮೊಬೈಲ್ ನೆಟ್‌ವರ್ಕ್ ಅಂತರ್ ಸಂಪರ್ಕ ಬಳಕೆ ಶುಲ್ಕವನ್ನು ಕೊನೆಗೊಳಿಸಲಾಗುತ್ತಿದೆ. ಐಯುಸಿ ಕ್ರಮಗಳ ಅನುಸಾರ ಜನವರಿ 1ರಿಂದ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್ ಮಾಡುವ ವಾಯ್ಸ್ ಕಾಲ್‌ಗಳಿಗೆ ಶುಲ್ಕ ಇರುವುದಿಲ್ಲ. ಈ ಹಿಂದಿನಿAದಲೂ ಜಿಯೊದಿಂದ ಜಿಯೊ ನೆಟ್‌ವರ್ಕ್‌ಗಳಿಗೆ ಎಲ್ಲ ಕರೆಗಳು ಉಚಿತವಾಗಿಸಿಗುತ್ತಿದ್ದು, 2021ರ ಜನವರಿ 1ರಿಂದ ಜಿಯೊದಿಂದ ಇತರೆ ನೆಟ್‌ವರ್ಕ್‌ಗಳಿಗೆ ಮಾಡುವ ಕರೆಗಳಿಗೂ ಶುಲ್ಕ ವಿಧಿಸುವುದಿಲ್ಲ. ಕಳೆದ ಒಂದು ವರ್ಷದಿಂದ ರಿಲಯನ್ಸ್ ಜಿಯೊದಿಂದ ಇತರೆ ನೆಟ್‌ವರ್ಕ್ಳಿಗೆ ಮಾಡುವ ಕರೆಗೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುತ್ತಿದೆ. ದೇಶದ ಇತರೆ ನೆಟ್‌ವರ್ಕ್‌ಗಳು ಬೇರೆ ಎಲ್ಲ ನೆಟ್‌ವರ್ಕ್‌ಗಳಿಗೂ ಉಚಿತವಾಗಿಯೇ ಕರೆ ಸೌಲಭ್ಯ ನೀಡುತ್ತಿವೆ. ಆದರೆ, ಗ್ರಾಹಕರು ಜಿಯೊಗೆ ಪಾವತಿಸುವ ಹಣಕ್ಕೆ ತಕ್ಕಷ್ಟು ಡೇಟಾ ನೀಡುವ ಮೂಲಕ ಪೈಪೋಟಿ ನೀಡುತ್ತಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top