ಆರೋಗ್ಯ ಮತ್ತು ವೈದ್ಯ ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಸಲಹೆ ಹಾಗೂ ಶಿಫಾರಸುಗಳನ್ನು ಪಡೆಯಲು ಸರ್ಕಾರ ನಿಮ್ಹಾನ್ಸ್ ನಿರ್ದೇಶಕ ಡಾ.ಜಿ. ಗುರುರಾಜ್ ಅಧ್ಯಕ್ಷತೆಯಲ್ಲಿ ವಿಷನ್ ಗ್ರೂಪ್ ರಚಿಸಿದೆ.
ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಆವಿಷ್ಕಾರಗಳನ್ನು ವಿಷನ್ ಗ್ರೂಪ್ ಸರ್ಕಾರದ ಗಮನಕ್ಕೆ ತರಲಿದೆ. ನಾನಾ ಆರೋಗ್ಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ಗುಣಾತ್ಮಕ ಬದಲಾವಣೆಗೆ ಸಲಹೆ ನೀಡಲಿದೆ. ಆರೋಗ್ಯ ಮತ್ತು ವೈದ್ಯ ಶಿಕ್ಷಣ ಇಲಾಖೆ ನಡುವೆ ಸಂಯೋಜನೆಯಲ್ಲದೆ, ಗುಣಮಟ್ಟದ ಆರೋಗ್ಯ ಸೇವೆಗೆ ಸಂಬAಧಿಸಿದAತೆ ಶಿಫಾರಸು ಮಾಡಲಿದೆ. ಸಮಿತಿಯಲ್ಲಿ ಹೃದಯ, ಎದೆರೋಗ, ನರವಿಜ್ಞಾನ ಸೇರಿದಂತೆ ನಾನಾ ವಿಭಾಗಗಳ ೩೮ ತಜ್ಞರು ಹಾಗೂ ಆರೋಗ್ಯ ಮತ್ತು ವೈದ್ಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಇದ್ದಾರೆ. ಅಂತಃಸ್ರಾವ ತಜ್ಞ ಡಾ. ಸತೀಶ್ ಸಮಿತಿಯ ಸಂಯೋಜಕರಾಗಿದ್ದಾರೆ.
ವಿಷನ್ ಗ್ರೂಪ್ ಸದಸ್ಯರು: ಡಾ. ಸುದರ್ಶನ್, ಡಾ. ಗಿರಿಧರ್ ಬಾಬು, (ಸಾರ್ವಜನಿಕ ಆರೋಗ್ಯ ವಿಭಾಗ), ಹೃದ್ರೋಗ ಶಾಸ್ತ್ರ-ಡಾ.ಸಿ.ಎನ್. ಮಂಜುನಾಥ್, ಡಾ. ವಿವೇಕ್ ಜವಳಿ, ಖಾಸಗಿ ಆರೋಗ್ಯ ಉದ್ದಿಮೆ ವಿಭಾಗ-ಡಾ. ಸುದರ್ಶನ್ ಬಲ್ಲಾಳ್, ಡಾ. ಮುರಳಿ, ಡಾ. ಶರಣ್ ಪಾಟೀಲ್, ಗ್ರಂಥಿ ವಿಜ್ಞಾನ- ಡಾ.ಬಿ.ಎಸ್. ಶ್ರೀನಾಥ್, ಅಂತಃಸ್ರಾವಶಾಸ್ತ್ರ- ಡಾ. ಸತೀಶ್, ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ- ಡಾ. ಸವಿತಾ, ಡಾ. ಅರವಿಂದ ಶೆಣೈ, ನೇತ್ರ ಶಾಸ್ತ್ರ-ಡಾ. ಭುಜಂಗ ಶೆಟ್ಟಿ, ಎದೆರೋಗ-ಡಾ. ರವಿ, ಡಾ. ಶಶಿಭೂಷಣ್, ಡಾ. ಆನಂದ್ ಆರ್., ಟ್ರಾಮಾ- ಡಾ. ಪ್ರದೀಪ್ ರಂಗಪ್ಪ, ಡಾ. ಗುರುರಾಜ್, ಡಾ. ವಿದ್ಯಾಧರ್ ಎಸ್, ನರವಿಜ್ಞಾನ-ಡಾ. ಮುರಳೀಧರ್, ನೆಫ್ರಾಲಜಿ-ಡಾ.ಜಿ. ವೆಂಕಟೇಶ್, ಸಾಂಕ್ರಾಮಿಕ ರೋಗಗಳು-ಡಾ. ರವಿ, ಯೋಗ-ಡಾ.ಎಚ್.ಆರ್. ನಾಗೇಂದ್ರ, ಹೋಮಿಯೋಪಥಿ-ಡಾ. ಮುನೀರ್ ಅಹಮ್ಮದ್ ಆರ್., ಆಯುಷ್-ಡಾ. ಅಮಿತ್ ಅಗರ್‌ವಾಲ್, ಯುನಾನಿ-ಡಾ. ಮೊಹ್ಮದ್ ಸಯೀದ್, ಆಯುರ್ವೇದ-ಡಾ. ಅಹಲ್ಯಾ ಶರ್ಮಾ, ಡಾ.ಬಿ.ಟಿ. ಚಿದಾನಂದಮೂರ್ತಿ, ಔಷಧ ತಯಾರಿಕೆ-ಡಾ. ರಾಕೇಶ್ ಬೊಂಜೈ, ಉತ್ತಮ ಆರೋಗ್ಯ ಸೌಲಭ್ಯ-ಡಾ. ವೀರಭದ್ರಯ್ಯ, ಡಾ.ಸ್ವಾತಿ, ಡಾ. ರವೀಂದ್ರ ಹಾಗೂ ಡಾ.ಎಸ್.ಡಿ. ಚಂದ್ರಶೇಖರ್.
Courtesyg: Google (photo)