ಬ್ಯಾಂಕ್ಗಳಲ್ಲಿ ಸಾಲ ನೀಡಿಕೆ ಮತ್ತು ಠೇವಣಿ ಸಂಗ್ರಹ ಡಿಸೆಂಬರ್ ೫ರಿಂದ ೧೮ರ ಅವಧಿಯಲ್ಲಿ ಹೆಚ್ಚಾಗಿದೆ ಎಂದು ಆರ್ಬಿಐ ತಿಳಿಸಿದೆ. ಬ್ಯಾಂಕ್ ಸಾಲ ನೀಡಿಕೆಯಲ್ಲಿ ಶೇ.೬.೦೫ ಹೆಚ್ಚಳವಾಗಿದ್ದು, ೧೦೫.೪೯ ಲಕ್ಷ ಕೋಟಿ ರೂ. ತಲುಪಿದೆ. ಠೇವಣಿ ಸಂಗ್ರಹ ಶೇ.೧೧.೩೩ ಹೆಚ್ಚಾಗಿದ್ದು, ೧೪೪.೮೨ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ೨೦೧೯ರ ಡಿಸೆಂಬರ್ನ ಇದೇ ಅವಧಿಯಲ್ಲಿ ಸಾಲ ನೀಡಿಕೆ ೯೯.೪೭ ಲಕ್ಷ ಕೋಟಿ ರೂ. ಹಾಗೂ ಠೇವಣಿ ಸಂಗ್ರಹ ೧೩೦.೦೯ ಲಕ್ಷ ಕೋಟಿ ರೂ. ಇತ್ತು. ಕೃಷಿ ಮತ್ತು ಅದಕ್ಕೆ ಸಂಬAಧಿಸಿದ ಚಟುವಟಿಕೆಗಳಿಗೆ ನೀಡುವ ಸಾಲದ ಪ್ರಮಾಣ ಶೇ ೭.೧ ರಿಂದ ಶೇ. ೭.೪ ಕ್ಕೆ ಹೆಚ್ಚಳ ಆಗಿದೆ ಎಂದು ತಿಳಿಸಿದೆ.
Courtesyg: Google (photo)