ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ತಾ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗಿನ ಮೂರು ಕಿಮೀ ಪ್ರದೇಶದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಯೋಜನೆಗೆ ನೀಡಲಾದ ಪರಿಸರ ಅನುಮತಿ ಮತ್ತು ಭೂಬಳಕೆ ಬದಲಾವಣೆ ಅಧಿಸೂಚನೆಗಳು ಕ್ರಮಬದ್ಧವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2019ರ ಸೆಪ್ಟೆಂಬರ್ನಲ್ಲೇ ಯೋಜನೆಯನ್ನು ಘೋಷಿಸಲಾಗಿತ್ತು. ತ್ರಿಕೋನಾಕಾರದ ಸಂಸತ್ ಭವನ ಹಾಗೂ 900 ರಿಂದ 1,200 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ ಯೋಜನೆಯ ಭಾಗವಾಗಿದೆ. 2022ರ ಆಗಸ್ಟ್ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ.
ಯೋಜನೆಗೆ ನೀಡಲಾದ ಅನುಮತಿಗಳ ಕುರಿತು ಪರಿಸರ ಕರ್ಯಕರ್ತ ರಾಜೀವ್ ಸೂರಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಸುಪ್ರೀಂ ಕೋರ್ಟ್ ಕಳೆದ ಡಿ.7ರಂದು ಯೋಜನೆಯ ಶಿಲಾನ್ಯಾಸಕ್ಕೆ ಅನುಮತಿ ನೀಡಿದ್ದರೂ, ಅಂತಿಮ ತೀರ್ಪು ಬಾರದೆ ಕೆಡವುವುದು ಅಥವಾ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿತ್ತು.
Courtesyg: Google (photo)