ಯಲಚೇನಹಳ್ಳಿ- ಸಿಲ್ಕ್ ಇನ್‌ಸ್ಟಿಟ್ಯೂಟ್‌ನ 6.29 ಕಿಮೀ ಉದ್ದದಲ್ಲಿ ಮೆಟ್ರೊ ರೈಲುಸಂಚಾರ ಜ.15ರಿಂದ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.
ಹಸಿರು ಮಾರ್ಗದ ಈ ದಾರಿಯಲ್ಲಿ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ನಿಲ್ದಾಣಗಳು ಇವೆ. ಮೈಸೂರು ರಸ್ತೆಯಲ್ಲಿ ಕೆಂಗೇರಿವರೆಗೆ ಮುಂದಿನ ಜೂನ್ ವೇಳೆಗೆ ಮೆಟ್ರೊ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ನೇರಳೆ ಮಾರ್ಗಕ್ಕೆ ಸೇರುವ ಇದು 7.5 ಕಿ.ಮೀ. ಉದ್ದವಿದೆ. ಪ್ರಸ್ತುತ ರಾತ್ರಿ 9 ರವರೆಗೆ ಮೆಟ್ರೊ ಸಂಚಾರ ಇದ್ದು, ಅವಧಿಯನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.
Courtesyg: Google (photo)