ಕೇಂದ್ರ ಸರ್ಕಾರ ಗೋವಾದಲ್ಲಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ಧಿ ಯೋಜನೆಗಳಿಂದ ಕಾಳಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಧಕ್ಕೆಯಾಗಲಿದೆ ಎಂದು ಅಧ್ಯಯನವೊಂದು ಹೇಳಿದೆ. ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ಆರು ಸಂಸ್ಥೆಗಳ ೩೦ ಪರಿಣತರಿದ್ದ ಅಧ್ಯಯನ ತಂಡವು ಯೋಜನೆಗಳಿಂದ ಪರಿಸರ ಮತ್ತು ಹುಲಿಗಳ ಚಲನವಲನಗಳ ಮೇಲೆ ಪರಿಣಾಮ ಉಂಟಾಗಲಿದೆ ಎಂದಿದೆ.
ನೈರುತ್ಯ ರೈಲ್ವೆಯಿಂದ ಜೋಡಿ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ-4ರ ಅಭಿವೃದ್ಧಿ ಹಾಗೂ ಕರ್ನಾಟಕ-ಗೋವಾ ನಡುವೆ ವಿದ್ಯುತ್ ಮಾರ್ಗ ನಿರ್ಮಾಣದಿಂದ ಮೇಲಾಗುವ ಪರಿಣಾಮ ಕುರಿತು ನಡೆದ ತಂಡ ಅಧ್ಯಯನ ನಡೆಸಿದೆ. ಗೋವಾ ಗಡಿಗೆ ಹೊಂದಿಕೊAಡಿರುವ ಅರಣ್ಯ, ಭೂಪ್ರದೇಶಗಳು ಇತರ ಅರಣ್ಯಗಳ ಜತೆಗೆ ಕಾಳಿ ಹುಲಿ ಸಂರಕ್ಷಿತ ಅರಣ್ಯಕ್ಕೂ ಸಂಪರ್ಕ ಕಲ್ಪಿಸುತ್ತವೆ. ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಗೋವಾದಲ್ಲಿ 43,456 ಮರಗಳು ಹಾಗೂ ರಾಜ್ಯದಲ್ಲಿ 61,289 ಮರ ಕಡಿಯಬೇಕಾಗುತ್ತದೆ. ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ 30,413 ಹೆಕ್ಟೇರ್ ಪ್ರದೇಶ ಕೂಡ ಯೋಜನೆಗೆ ಬಳಕೆಯಾಗಲಿದೆ ಎಂದು ವರದಿ ಹೇಳಿದೆ.
Courtesyg: Google (photo)