ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡುವ ಲಸಿಕೆಯ ಮೊದಲ ಹಂತದ ಪ್ರಯೋಗವನ್ನು ಫೆಬ್ರವರಿ-ಮಾರ್ಚ್ನಲ್ಲಿ ಆರಂಭಿಸಲಿದೆ. ಸಂಸ್ಥೆಯ ಕೊರೊನಾ ಲಸಿಕೆ ಕೊವ್ಯಾಕ್ಸಿನ್ಗೆ ಈಗಾಗಲೇ ಔಷಧ ಮಹಾ ನಿಯಂತ್ರಕರು ಅನುಮೋದನೆ ನೀಡಿದ್ದಾರೆ. ಹೊಸ ಲಸಿಕೆ ಅಭಿವೃದ್ಧಿಗೆ ವಾಷಿಂಗ್ಟನ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮೆಡಿಸಿನ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಬಿಬಿವಿ೧೫೪ ಎಂಬ ಹೆಸರಿನ ಈ ಲಸಿಕೆಯ ಕ್ಲಿನಿಕಲ್ ಪೂರ್ವ ಅಧ್ಯಯನವನ್ನು ಭಾರತ ಮತ್ತು ಅಮೆರಿಕದಲ್ಲಿ ನಡೆಸಲಾಗಿದೆ. ಮಾನವ ಪ್ರಯೋಗದ ಮೊದಲ ಹಂತ ಫೆಬ್ರವರಿ–ಮಾರ್ಚ್ ೨೦೨೧ರಲ್ಲಿ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಮೊದಲ ಹಂತದ ಮಾನವ ಪ್ರಯೋಗವನ್ನು ಭಾರತ, ಸೇಂಟ್ ಲೂಯಿಸ್ ಯೂನಿವರ್ಸಿಟಿ ವ್ಯಾಕ್ಸಿನ್ ಮತ್ತು ಚಿಕಿತ್ಸಾ ಮೌಲ್ಯಮಾಪನ ಘಟಕದಲ್ಲಿ ನಡೆಸಲಾಗುವುದು. ಅಮೆರಿಕ, ಜಪಾನ್, ಯುರೋಪ್ ಹೊರತುಪಡಿಸಿ ಬೇರೆಡೆ ವಿತರಣೆ ಹಕ್ಕನ್ನು ಭಾರತ್ ಬಯೋಟೆಕ್ ಹೊಂದಿದೆ ಎಂದರು.
Courtesyg: Google (photo)