ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆವರಣದಲ್ಲಿ ಫೆ.8ರಿಂದ 12ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ ನಡೆಯಲಿದ್ದು, ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶ ಇರಲಿದೆ ಎಂದು ಐಐಎಚ್ಆರ್ ನಿರ್ದೇಶಕ ಎಂ.ಆರ್.ದಿನೇಶ್ ತಿಳಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ಹಾಗೂ ಆನ್ಲೈನ್ ಮೂಲಕ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. 30 ಸಾವಿರ ರೈತರಿಗೆ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ರತಿದಿನ ಆರು ಸಾವಿರ ನೋಂದಾಯಿತ ರೈತರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಎರಡು ಅವಧಿಗಳಲ್ಲಿ ಮೇಳ ವೀಕ್ಷಿಸಬಹುದು. ಹೊರ ರಾಜ್ಯಗಳಿಂದ ಬರುವ ರೈತರು ಮೇಳದಲ್ಲಿ ಭಾಗವಹಿಸಲು ಕೆಲವು ನಿಯಮ ಪಾಲಿಸಬೇಕು ಎಂದರು.
ದೇಶದ ೭೦೦ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ಗಳ ಮೂಲಕ ರೈತರನ್ನು ಮೇಳ ತಲುಪಲಿದೆ. 16ರಾಜ್ಯಗಳ 300ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳ ತಜ್ಞರಿಂದ ಮಾಹಿತಿ ದೊರೆಯಲಿದೆ. ತೋಟಗಾರಿಕೆ ಬೆಳೆಗಳಿಗೆ ಸಂಬAಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಾಗಾರಗಳು ನಡೆಯಲಿವೆ. ನವೋದ್ಯಮ ಮತ್ತು ಸದೃಢ ಭಾರತಕ್ಕೆ ತೋಟಗಾರಿಕೆ ಧ್ಯೇಯವಾಕ್ಯದಡಿ ನಡೆಯಲಿರುವ ಭೌತಿಕ ಹಾಗೂ ಆನ್ಲೈನ್ ಮೇಳದಲ್ಲಿ 25 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
Courtesyg: Google (photo)