ಏಪ್ರಿಲ್ 2021ರಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆ ಶೇ.8.9ರಷ್ಟು ಪ್ರಗತಿ ಹೊಂದಲಿದೆ ಎಂದು ಐಎಚ್‌ಎಸ್ ಮರ್ಕಿಟ್ ಸಂಸ್ಥೆ ಅಂದಾಜಿಸಿದೆ. ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಗಣನೀಯ ಚೇತರಿಕೆ ಕಂಡಿದ್ದು, ಇದರಿಂದ ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಗತಿ ಸಾಧ್ಯವಾಗಲಿದೆ. ದೇಶದ ಅರ್ಥ ವ್ಯವಸ್ಥೆ 2020ರಲ್ಲಿ ಅತ್ಯಂತ ಹಿನ್ನಡೆ ಕಂಡಿದೆ. ಮಾರ್ಚ್-ಆಗಸ್ಟ್ ಅವಧಿಯಲ್ಲಿ ಅತಿ ಹೆಚ್ಚು ಕುಗ್ಗಿದ್ದು, ಸೆಪ್ಟೆಂಬರ್ ನಂತರ ಚೇತರಿಸಿಕೊಂಡಿದೆ ಎಂದು ಸಂಸ್ಥೆ ಹೇಳಿದೆ.
ಮಾರ್ಚ್‌ಗೆ ಕೊನೆಯಾಗಲಿರುವ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇ.7.7ರಷ್ಟು ಕುಗ್ಗಲಿದೆ. ಇದು ನಾಲ್ಕು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಸ್ಥಿತಿ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಘಟನೆ(ಎನ್‌ಎಸ್‌ಒ) ಗುರುವಾರ ಹೇಳಿತ್ತು. ತಯಾರಿಕೆ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಕಾಣಿಸಿದೆ. ಕೋವಿಡ್ ನಿರ್ಬಂಧಗಳ ತೆರವಿನ ಬಳಿಕ ಡಿಸೆಂಬರ್‌ನಲ್ಲಿ ಕಾರ್ಖಾನೆಗಳಿಗೆ ಹೆಚ್ಚು ಬೇಡಿಕೆಗಳು ಬರುತ್ತಿವೆ: ಮಾರುಕಟ್ಟೆ ಸ್ಥಿತಿ ಉತ್ತಮಗೊಂಡಿದೆ.
Courtesyg: Google (photo)