ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ 2021ರ ನೋಂದಣಿ ಗಡುವನ್ನ ವಿಸ್ತರಿಸಿದ್ದು, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಅರ್ಜಿ ಸಲ್ಲಿಕೆಯ ವಿಂಡೋ ಮಾರ್ಚ್ 10ರವರೆಗೆ ತೆರೆದಿರುತ್ತದೆ. ಆಕಾಂಕ್ಷಿಗಳು ಅಧಿಕೃತ ವೆಬ್ ಸೈಟ್ʼಗೆ ಭೇಟಿ ನೀಡಿ ನಿಗದಿತ ಅವಧಿಯಲ್ಲಿ ಅರ್ಜಿಗಳನ್ನ ಸಲ್ಲಿಸಬಹುದಾಗಿದೆ.
ಇನ್ನು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಮೊದಲು ನೋಂದಾಯಿಸಿಕೊಂಡವರೆಲ್ಲರೂ ಜೆಇಇ ಮೇನ್ 2021 ಅರ್ಜಿ ನಮೂನೆಯಲ್ಲಿ ವಿವರಗಳನ್ನ ಅಧಿಕೃತ ಸೈಟ್ jeemain.nta.nic.in ಗೆ ತೆರಳಿ ಮಾರ್ಪಡಿಸಬಹುದು.
ಅಂದ್ಹಾಗೆ, ಎನ್ ಟಿಎಯ ಅಧಿಕೃತ ಅಧಿಸೂಚನೆಯಲ್ಲಿ ಒಂದು ಕಡೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 9 ಎಂದು ನಮೂದಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ 2021ರ ಮಾರ್ಚ್ 9ರವರೆಗೆ (2100 ಗಂಟೆ) ಅವಕಾಶ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. ಆದರೆ, ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಮಾರ್ಚ್ 10ರ ವರೆಗೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ವಿವರವಾದ ವೇಳಾಪಟ್ಟಿ ಯಲ್ಲಿ ತಿಳಿಸಲಾಗಿದೆ.
ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಈ ಹಂತಗಳನ್ನ ಅನುಸರಿಸಿ
ಹಂತ 1: jeemain.nta.nic.in ಭೇಟಿ ನೀಡಿ
ಹಂತ 2: ನಿಯೋಜಿತ ಅಪ್ಲಿಕೇಶನ್ ಲಿಂಕ್ ಮೇಲೆ
ಹಂತ 3: ಹೊಸ ನೋಂದಣಿ ಮೇಲೆ ಮತ್ತು ನಿಮ್ಮ ಶೈಕ್ಷಣಿಕ, ವೈಯಕ್ತಿಕ ವಿವರಗಳನ್ನು ನಮೂದಿಸಿ
ಹಂತ 4: ಅರ್ಜಿ ಶುಲ್ಕವನ್ನು ಸಲ್ಲಿಸಿ ಮತ್ತು ಪಾವತಿಸಿ.
ಹಂತ 5: ಅರ್ಜಿ ನಮೂನೆಯನ್ನ ಡೌನ್ ಲೋಡ್ ಮಾಡಿಕೊಂಡು ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಅರ್ಜಿ ನಮೂನೆಯಲ್ಲಿ ಬದಲಾವಣೆಗಳನ್ನು ಮಾಡಲು, ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್ ವರ್ಡ್ʼನೊಂದಿಗೆ ಲಾಗಿನ್ ಆಗಬೇಕಾಗುತ್ತದೆ.
ಎನ್ ಟಿಎ ಅಭ್ಯರ್ಥಿಗಳಿಗೆ ಮರೆತು ಹೋದ ಅಪ್ಲಿಕೇಶನ್ ಸಂಖ್ಯೆಯನ್ನು ಮರು ಸೃಷ್ಟಿಮಾಡುವ ಆಯ್ಕೆಯನ್ನು ಸಹ ಒದಗಿಸಿದೆ. ಅರ್ಜಿ ಸಂಖ್ಯೆಯನ್ನ ಪಡೆಯಲು ಅಭ್ಯರ್ಥಿಗಳು ತಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ಮತ್ತು ಹುಟ್ಟಿದ ದಿನಾಂಕಗಳನ್ನು ‘ಮರೆತ ಅಪ್ಲಿಕೇಶನ್ ಸಂಖ್ಯೆ’ ವಿಂಡೋದಲ್ಲಿ ನಮೂದಿಸಬೇಕು. ವಿದ್ಯಾರ್ಥಿಗಳು ಮರೆತಿದ್ದರೆ ಪಾಸ್ ವರ್ಡ್ʼಗಳನ್ನು ರೀಸೆಟ್ ಮಾಡಬಹುದು.