ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು: ಕಿರು ಪರಿಚಯ

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು: ಒಂದು ಕಿರು ಪರಿಚಯ , ಆಶಾ ಸಿದ್ದಲಿಂಗಯ್ಯ
ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು. ನಶಿಸಿಹೋಗುತ್ತಿರುವ ಈ ಕಲಾಪ್ರಕಾರದ ಮಹತ್ವ ಹಾಗೂ ಅದರ ವಿಶೇಷತೆ, ನಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯ ಪರಿಚಯ ನಾಡಿನ ಪ್ರತಿಯೊಬ್ಬ ನಾಗರಿಕರಿಗೂ ಅರಿವಿರಬೇಕಾದುದು ಅಗತ್ಯ.
ನಂದೀಧ್ವಜ ಕುಣಿತ: ನಂದೀಧ್ವಜವನ್ನು ನಂದೀಕಂಬ, ನಂದೀಕೋಲು, ವ್ಯಾಸಗೋಲು, ನಂದೀಪಟವೆಂದೂ ಕರೆಯುತ್ತಾರೆ. ಕೊಡಗು ಕರಾವಳಿಯಲ್ಲಿ ಬಿಟ್ಟರೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಕಲೆ ರೂಢಿಯಲ್ಲಿದೆ.
ವೀರಗಾಸೆ: ಶೈವ ಸಂಪ್ರದಾಯದ ಒಂದು ಮಹತ್ವಪೂರ್ಣ ಕಲೆ ವೀರಗಾಸೆ. ದಕ್ಷ ಬ್ರಹ್ಮನ ಯಜ್ಞವನ್ನು ಧ್ವಂಸಮಾಡಿ ಬಂದ ವೀರಭದ್ರನ ವಿಜೃಂಭಣೆಯೇ ವೀರಗಾಸೆ.
ಕೊಂಬು ಕಹಳೆ: ನಮ್ಮ ನಾಡಿನ ಹಳ್ಳಿಗಳಲ್ಲಿ ಬಳಕೆಯಲ್ಲಿರುವ ವಾದ್ಯಗಳ ಗುಂಪುಗಳಲ್ಲಿ ಕೊಂಬು ಕಹಳೆಗಳಿಗೆ ಮೊದಲನೇ ಸ್ಥಾನ. ಜಾತ್ರೆ ಉತ್ಸವದಲ್ಲಿ ಎಲ್ಲಾ ವಾದ್ಯಗಳಿಗೂ ಮೊದಲು ಕೊಂಬು ಕಹಳೆ ಮೊಳಗಲೇಬೇಕು.
ಬೀಸು ಕಂಸಾಳೆ: ಏಳು ಬೆಟ್ಟದ ಸಾಲುಗಳ ಸುಂದರ ಮಲೆಗಳನ್ನು ತಾಣವನ್ನಾಗಿ ಮಾಡಿಕೊಂಡಿರುವ ಮಹದೇಶ್ವರನ ಪರಮ ಭಕ್ತರು ಗುಡ್ಡರು. ಸ್ವಾಮಿಯ ಆರಾಧನೆಗಾಗಿ ಕಂಚಿನ ಅಥವಾ ಹಿತ್ತಾಳೆಯ ತಾಳ ಹಿಡಿದು ಹಾಡುವುದೇ “ಕಂಸಾಳೆ”. ಬೀಸು ತಾಳದೊಂದಿಗೆ ಕುಣಿಯುವುದೇ “ಬೀಸು ಕಂಸಾಳೆ”.
ಪಟ ಕುಣಿತ: ಬಣ್ಣ ಬಣ್ಣದ ಬಟ್ಟೆಯ ಸುತ್ತಿ, ಅದರ ಮೇಲೆ ರೇಷ್ಮೆ ಜಾಲರಿ ಕಟ್ಟಿ, ತುತ್ತ ತುದಿಗೆ ಬಣ್ಣದ ಕುಚ್ಚು ಅಲಂಕಾರ ಮಾಡಿದ ಹದಿನೈದು-ಇಪ್ಪತ್ತು ಅಡಿ ಎತ್ತರದ ಬಿದಿರಿನ ಜವಳಿಯ ಕೋಲನ್ನು ಕೈಯಲ್ಲಿ ಹಿಡಿದು ವಾದ್ಯದ ಲಯಕ್ಕೆ ಕುಣಿಯುವ ಒಂದು ಕಲೆ ಪಟದ ಕುಣಿತ
 ಕೀಲು ಕುದುರೆ: ಇದು ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರಚಲಿತವಿರುವ ಜನಪ್ರಿಯ ಕುಣಿತ. ಕೊಡಗಿನಲ್ಲಿ ಇದನ್ನು ಪೋಯಾ ಕುದುರೆ ಎನ್ನುತ್ತಾರೆ. ಕೀಲು ಕುದುರೆಗಳನ್ನು ಮುಖ್ಯವಾಗಿ ಬಿದಿರಿನ ದಬ್ಬೆಗಳಿಂದ ರಚಿಸಿರುತ್ತಾರೆ.
ಹೆಜ್ಜೆ ಮೇಳ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಂದರ್ಭದ ಒಂದು ವಿಶೇಷ ಕುಣಿತ “ಹೆಜ್ಜೆ ಮೇಳ”. ಇದು ದಕ್ಷಿಣ ಕರ್ನಾಟಕದ ಸುಗ್ಗಿಯ ಕುಣಿತವನ್ನು ಹೋಲುತ್ತದೆ. ಇದು ಮುಸ್ಲಿಂ ಹಬ್ಬದ ಕುಣಿತವಾದರೂ ಹಿಂದೂಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ.
ಸುಗ್ಗಿ ಕುಣಿತ: ನಾಡಿನ ನಾನಾ ಭಾಗಗಳಲ್ಲಿ ಸುಗ್ಗಿ ಕುಣಿತ ಕಲೆ ಪ್ರಚಲಿತದಲ್ಲಿದೆ. ವರ್ಷವೆಲ್ಲ ಬೆವರು ಸುರಿಸಿ ದುಡಿದ ಫಲ ಕೈಗೆ ಸಿಕ್ಕುವ ಹಿಗ್ಗಿನ ಕಾಲ ಸುಗ್ಗಿನ ಕಾಲ ಸುಗ್ಗಿಯ ಕಾಲ. ಕಾಮನ ಹುಣ್ಣಿಮೆಯ ಸಂದರ್ಭದಲ್ಲಿ ಈ ಕಲೆಯ ಪ್ರದರ್ಶನವಾಗುತ್ತದೆ.
ತಮಟೆ ಮೇಳ: ಹಳ್ಳಿ ಎಂದರೆ ತಮಟೆ ಇರಲೇಬೇಕು. ತಮಟೆಗೆ ತಪ್ಪಟೆ, ಹಲಗೆ ಎಂದೂ ಕರೆಯುತ್ತಾರೆ. ಹಲಗೆ ವಾದ್ಯವು ಬಹಳ ಸರಳ. ವೃತ್ತಾಕಾರದ ಮರದ ಬಳೆಗೆ ಹದಗೊಳಿಸಿ ನಯಗೊಳಿಸಿದ ಚರ್ಮವನ್ನು ಬಿಗಿದು ತಮಟೆ ತಯಾರಿಸಲಾಗುತ್ತದೆ.

ಸುದ್ದಿ ಸಂಗ್ರಹ : ಆಶಾ ಸಿದ್ದಲಿಂಗಯ್ಯ

Journalist,Translator,avid bibliophile

Leave a Reply

Your email address will not be published. Required fields are marked *

Back To Top