ಸಮಾನತೆಯ ಚರಿತ್ರೆ – ಥಾಮಸ್‌ ಪಿಕೆಟ್ಟಿ. ಸಂಗ್ರಹಾನುವಾದ: ಟಿ ಎಸ್‌ ವೇಣುಗೋಪಾಲ್

ಫ್ರೆಂಚ್‌ ಅರ್ಥಶಾಸ್ತ್ರಜ್ಞ ಥಾಮಸ್‌ ಪಿಕೆಟ್ಟಿ ಸಮಾನತೆ, ಅಸಮಾನತೆ ಹಾಗೂ ಬಡತನವನ್ನು ಕುರಿತು ಅಪಾರ ಅಧ್ಯಯನ ನಡೆಸಿರುವ ವಿದ್ವಾಂಸ. ಅವರು ಸಂಪತ್ತಿನ ಕೇಂದ್ರೀಕರಣ ಹಾಗೂ ಅಸಮಾನತೆ ಕುರಿತ ಅಧ್ಯಯನವನ್ನು ವಿಶ್ಲೇಷಣೆಗೆ ಸೀಮಿತಗೊಳಿಸದೆ, ಪರಿಹಾರವನ್ನೂ ಸೂಚಿಸುತ್ತಾರೆ. ಆದ್ದರಿಂದ, ಸಮಸಮಾಜದ ನಿರ್ಮಾಣದ ಕನಸನ್ನು ಇಟ್ಟುಕೊಂಡವರು ಈ ಚರ್ಚೆಯಲ್ಲಿ ಅವಶ್ಯವಾಗಿ ಪಾಲ್ಗೊಳ್ಳಬೇಕಿದೆ. ಅವರ ಪ್ರಕಾರ, ಎಲ್ಲರಿಗೂ ಶಿಕ್ಷಣ ದೊರೆಯಬೇಕು. ಕೆಳಸ್ತರದ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಹಾಗೂ ಅದಕ್ಕೆ ಸಂಪನ್ಮೂಲ ಕ್ರೋಡೀಕರಣ ನಮ್ಮ ಗುರಿ ಆಗಿರಬೇಕು. ಇಲ್ಲಿ ಹಣ ಮುಖ್ಯವಲ್ಲ. ಅದರ ಜೊತೆ ಬರುವ ಅಧಿಕಾರ ಹಾಗೂ ಅವಕಾಶಗಳು ಮುಖ್ಯ.
ಏನೂ ಬದಲಾಗುವುದಿಲ್ಲ; ಯಾವುದನ್ನೂ ಬದಲಿಸಲು ಸಾಧ್ಯವಿಲ್ಲ ಅನ್ನುವುದು ಸರಿಯಲ್ಲ. ಬದಲಾವಣೆ ಹಿಂದೆಯೂ ಆಗಿತ್ತು; ಮುಂದೆಯೂ ಆಗುತ್ತದೆ. ಆದರೆ, ಇದಕ್ಕಾಗಿ ಪ್ರಬಲವಾದ ಸಾಮಾಜಿಕ ಸಂಘಟನೆ ರೂಪುಗೊಳ್ಳಬೇಕು. ಆರ್ಥಿಕ ಪ್ರಶ್ನೆಗಳು ಬಹಳ ಮುಖ್ಯ. ಅದನ್ನು ತಜ್ಞರಿಗೆ ಬಿಟ್ಟು ಸುಮ್ಮನಿರಬಾರದು. ಸಮಾನತೆಗಾಗಿ ನಡೆಸುವ ಹೋರಾಟಕ್ಕೆ ಬೇಕಾದ ಜ್ಞಾನವನ್ನು ಜನ ಪಡೆದುಕೊಳ್ಳುವುದು ಅತ್ಯವಶ್ಯಕ. ಅವರ ಬರಹಗಳು ಇಂತಹ ಹೋರಾಟಕ್ಕೆ ಜನರನ್ನು ಸಿದ್ದಗೊಳಿಸಲು ಬೇಕಾದ ಸಾಮಗ್ರಿಯನ್ನು ಒದಗಿಸುತ್ತವೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top