ರೇಷ್ಮೆ-ಮಾವು ಸಂಸ್ಕರಣಾ ಘಟಕ ಸ್ಥಾಪನೆ

ಸುಸಜ್ಜಿತ ರೇಷ್ಮೆ ಮಾರುಕಟ್ಟೆ ಮತ್ತು ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ರಾಮನಗರ ಮತ್ತು ಚನ್ನಪಟ್ಟಣದ ನಡುವೆ 11 ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕೆ ನಬಾರ್ಡ್ ₹ 50 ಕೋಟಿ ಸಾಲ ನೀಡದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಈ ಜಾಗದಲ್ಲಿ ರೇಷ್ಮೆಯ ದ್ವಿತಳಿ, ಮಿಶ್ರತಳಿ ಗೂಡು ಖರೀದಿ ಕೇಂದ್ರಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುವುದು. ರೈತರು ರಾತ್ರಿ ವೇಳೆ ತಂಗಲು ವಸತಿ ವ್ಯವಸ್ಥೆ ಜತೆಗೆ ಸುಲಭ ಹಣಕಾಸು ವ್ಯವಹಾರಕ್ಕೆ ಬ್ಯಾಂಕಿAಗ್ ವ್ಯವಸ್ಥೆ ಮಾಡಲಾಗುವುದು. ದತ್ತಾಂಶ ಸಂಗ್ರಹ: ನೂತನ ಮಾರುಕಟ್ಟೆಗೆ ಬಂದು ರೇಷ್ಮೆ ಗೂಡು ಮಾರಾಟ ಮಾಡುವ ರೈತರ ಹಾಗೂ ಗೂಡಿನ ದತ್ತಾಂಶವನ್ನು ಸಂಗ್ರಹ ಮಾಡಲಾಗುವುದು. ಅತ್ಯುತ್ತಮ ಗೂಡು ಉತ್ಪಾದನೆ ಮಾಡುವ ರೈತರ ಮಾಹಿತಿ ಸಮಗ್ರವಾಗಿ ಸಿಗುವಂತೆ ನೋಡಿಕೊಳ್ಳಲಾಗವುದು ಎಂದೂ ತಿಳಿಸಿದರು. ಮಾವು ಸಂಸ್ಕರಣಾ ಘಟಕ: ರಾಮನಗರ ತಾಲ್ಲೂಕಿನ ಕೈಲಾಂಚ ಗ್ರಾಮದ ಬಳಿ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಾವು ಸಂಸ್ಕರಣಾ ಘಟಕಕ್ಕೆ ರೇಷ್ಮೆ ಇಲಾಖೆ ತನ್ನ ಅಧೀನದಲ್ಲಿದ್ದ 25 ಎಕರೆ ಭೂಮಿಯನ್ನು ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸಲು ಒಪ್ಪಿದೆ. ಇದರಿಂದ ಸುತ್ತ-ಮುತ್ತಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಉಪ ಮುಖ್ಯುಮಂತ್ರಿ ತಿಳಿಸಿದರು.

Courtesyg: Google (photo)

 

Journalist,Translator,avid bibliophile

Leave a Reply

Your email address will not be published. Required fields are marked *

Back To Top