ದೇಶದಲ್ಲಿ ಡೀಸೆಲ್ ಬೇಡಿಕೆಯು ಕೋವಿಡ್–19 ಮೊದಲಿನ ಮಟ್ಟಕ್ಕೆ ಮರಳುತ್ತಿದೆ ಎಂದು ಉದ್ಯಮ ವಲಯ ಮಾಹಿತಿ ನೀಡಿದೆ. ಅಕ್ಟೋಬರ್ ೧ರಿಂದ ೧೫ರವರೆಗಿನ ಅವಧಿಯಲ್ಲಿ ಡೀಸೆಲ್ ಮಾರಾಟ ಶೇ ೮.೮ರಷ್ಟು ಹೆಚ್ಚಾಗಿದ್ದು 26.5 ಲಕ್ಷ ಟನ್‌ಗಳಿಗೆ ತಲುಪಿದೆ. ಸೆಪ್ಟೆಂಬರ್ 1ರಿಂದ 15 ದಿನಗಳ ಅವಧಿಯಲ್ಲಿ 21.3 ಲಕ್ಷ ಟನ್ ಮಾರಾಟವಾಗಿತ್ತು. 2019ರ ಇದೇ ಅವಧಿಯಲ್ಲಿ 24.3 ಲಕ್ಷ ಟನ್ ಮಾರಾಟವಾಗಿತ್ತು. ಮಾರ್ಚ್ನಲ್ಲಿ ಲಾಕ್‌ಡೌನ್ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಡೀಸೆಲ್ ಮಾರಾಟದಲ್ಲಿ ಏರಿಕೆ ಕಂಡುಬAದಿದೆ. ಕೋವಿಡ್ಗೂ ಮುಂಚಿನ ಸ್ಥಿತಿಗೆ ಸೆಪ್ಟೆಂಬರ್‌ನಲ್ಲಿ ಮರಳಿದ್ದ ಪೆಟ್ರೋಲ್ ಮಾರಾಟ ಅಕ್ಟೋಬರ್ 1 ರಿಂದ 15ರವರೆಗಿನ ಅವಧಿಯಲ್ಲಿ ಶೇ 1.5ರಷ್ಟು ಹೆಚ್ಚಾಗಿದ್ದು, 9.67 ಲಕ್ಷ ಟನ್‌ಗಳಷ್ಟಾಗಿದೆ. 2019ರ ಅಕ್ಟೋಬರ್ನ ಇದೇ ಅವಧಿಯಲ್ಲಿ 9.82 ಲಕ್ಷ ಟನ್ಗಳಷ್ಟಿತ್ತು. ಲಾಕ್‌ಡೌನ್ ನಿಯಮಗಳನ್ನು ಹಂತ ಹಂತವಾಗಿ ಸಡಿಲಿಸುತ್ತಿರುವುದು ಹಾಗೂ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿರುವುದರಿಂದಾಗಿ ಇಂಧನ ಬೇಡಿಕೆಯು ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಉದ್ಯಮ ವಲಯ ತಿಳಿಸಿದೆ.