ಮಾಹ-ಮಾರಿ ಕೋವಿಡ್‌ನಿಂದಾಗಿ ಎಲ್ಲಾ ಉದ್ಯಾನಗಳು ಮುಚ್ಚಲಾಗಿತ್ತು. ಆಲಮಟ್ಟಿಯ ವಿವಿಧ ಉದ್ಯಾನಗಳು ಸೋಮವಾರದಿಂದ ಪ್ರವೇಶಕ್ಕೆ ಅನುಮತಿ ನೀಡಿ ಜನರಲ್ಲಿ ಮಂದಹಾರ ಮೊಡಿಸಿದ್ದಾರೆ. ಸೋಮವರದಿಂದ ಪ್ರವಾಸಿಗರಿಗೆ ಪ್ರವೇಶಕ್ಕೆ ಸೈ ಎಂದಿದೆ. ಏಳು ತಿಂಗಳಿಂದ ಮುಚ್ಚಿದ್ದ ಆಲಮಟ್ಟಿಯ ಉದ್ಯಾನಗಳಲ್ಲಿ ಸಮರ್ಪಕ ನಿರ್ವಹಣೆಯ ಫಲವಾಗಿ ಹಚ್ಚ-ಹಸಿರಾಗಿ ಮೈದುಂಬಿ ಕೊಂಡು ನಳನಳಿಸುತ್ತಿದೆ. ಈ ಬಾರಿಯ ಆಕರ್ಷಣೆಯ ಕೇಂದ್ರ ರಾಕ್ ಉದ್ಯಾನದಲ್ಲಿ ಆಕ್ಟೋಪಸ್, ಮೀನು, ಡ್ರಾಗನ್ ಮಾದರಿಯಲ್ಲಿ ನಿರ್ಮಿಸಿದ ಮೂರು ಪ್ರತ್ಯೇಕ ಜಾರುಬಂಡೆಗಳು, ತೂಗು ಸೇತುವೆ ಹಾಗೂ ಸಂಗೀತ ಕಾರಂಜಿ ಬಳಿ ಸುಮಾರು 2,500 ಗುಲಾಬಿ ಗಿಡದ ವನ ಆಲಮಟ್ಟಿಯ ಉದ್ಯಾನಗಳಿಗೆ ಹೊಸದಾಗಿ ಸೇರ್ಪಡೆಗೊಂಡು ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿವೆ. ದೋಣಿ ವಿಹಾರ ಶೀಘ್ರ ಆರಂಭ: ಇಲ್ಲಿಯ ರಾಕ್ ಉದ್ಯಾನದ ಸಿಲ್ವರ್ ಲೇಕ್ನಲ್ಲಿರುವ ದೋಣಿ ವಿಹಾರ ಸದ್ಯ ಬಂದಾಗಿದೆ. ಇಲ್ಲಿರುವ ರಾಫ್ಟ್ ಬೋಟಿಂಗ್, ಲೈಫ್ ಜಾಕೇಟ್ಗಳನ್ನು ಭೀಮಾ ನದಿ ಪ್ರವಾಹ ನಿಯಂತ್ರಣದಲ್ಲಿ ಬಳಸಲು ಜಿಲ್ಲಾಡಳಿತ ತೆಗೆದುಕೊಂಡು ಹೋಗಿದೆ. ಬಹುತೇಕ ಇದೇ ತಿಂಗಳಾAತ್ಯಕ್ಕೆ ಬೋಟಿಂಗ್ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಕ್ಷತೆಗೆ ಹೆಚ್ಚು ಒತ್ತು ಎಲ್ಲಾ ದ್ವಾರದ ಬಳಿ ಸೆನ್ಸರ್ ಆಧಾರಿತ ಸ್ಯಾನಿಟೈಸರ್ ಯಂತ್ರ ಅಳವಡಿಸಲಾಗಿದೆ. ಸ್ಯಾನಿಟೈಸರ್, ಮಾಸ್ಕ್ ಬಳಕೆ, ಥರ್ಮಲ್ ಸ್ಕ್ರಿನಿಂಗ್ ಪರೀಕ್ಷೆಗೆ ಮಾಡಲಾಗುವುದು. ಹಿರಿಯರಿಗೆ ₹20, ಕಿರಿಯರಿಗೆ ₹10 ಪ್ರವೇಶ ದರವಿದೆ. ಇನ್ನುಳಿದಂತೆ ರಾಕ್, ಲವ–ಕುಶ, ಕೃಷ್ಣಾ ಉದ್ಯಾನಕ್ಕೆ ತಲಾ ₹10 ಪ್ರವೇಶ ದರ ನಿಗದಿಗೊಳಿಸಿದೆ ಹಿರಿಯರು ಮಕ್ಕಳಲ್ಲಿ ಮಂದಹಾಸದ ನಗೆ ಬಿರಿದ್ದಾರೆ.