ಸಹಕಾರ ಶಿಕ್ಷಣ ನಿಧಿಗೆ 4 ಲಕ್ಷ ರೂ ಚೆಕ್ ವಿತರಣೆ
ಚನ್ನಪಟ್ಟಣ ಶಿಬಿರ ಕಚೇರಿಯಲ್ಲಿ ಬಮುಲ್ ನಿರ್ದೇಶಕರಾದ ಹೆಚ್.ಸಿ. ಜಯಮುತ್ತು ರವರು ಚನ್ನಪಟ್ಟಣ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಸಹಕಾರ ಶಿಕ್ಷಣ ನಿಧಿಗೆ 4 ಲಕ್ಷ ರೂಪಾಯಿಗಳ ಚೆಕ್ಕನ್ನು ರಾಮನಗರ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಿಂ.ಲಿಂ. ನಾಗರಾಜು ರವರಿಗೆ ನೀಡಿದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕುಕ್ಕೂರುದೊಡ್ಡಿ ಜಯರಾಮು ರವರು ಉಪ ವ್ಯವಸ್ಥಾಪಕರಾದ ಡಾ. ಕೆಂಪರಾಜು ರವರು. ಹಾಗೂ ಮುಖಂಡರು ಉಪಸ್ಥಿತರಿದ್ದರು.
ಉತ್ತರಾಖಂಡ ಹಿಮಪ್ರವಾಹ : 150 ಕ್ಕೂ ಹೆಚ್ಚು ಮಂದಿ ನಾಪತ್ತೆ
ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದಲ್ಲಿ ದುರಂತವೊಂದು ನಡೆದು ಹೋಗಿದೆ. ಹಿಮಪಾತ ಸಂಭವಿಸಿದ ಪರಿಣಾಮ, ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ನೂರಾರು ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಧೌಲಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ನದಿ ತಟದ ರೌನಿ ಎಂಬ ಗ್ರಾಮಕ್ಕೆ ನೀರು ನುಗ್ಗಿದೆ. ಅಷ್ಟೇ ಅಲ್ಲ, ಜಲವಿದ್ಯುತ್ ಸ್ಥಾವರ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲೂ ಭಾರೀ ನಷ್ಟ ಉಂಟಾಗಿದೆ. ಈವರೆಗಿನ ಅಂದಾಜಿನ […]
ಕೋವಿಡ್‌ನಿಂದ ಜೈವಿಕ-ವೈದ್ಯ ತ್ಯಾಜ್ಯದ ಬೆಟ್ಟ
ಕೋವಿಡ್ ಸೋಂಕು ಬಳಿಕ 7 ತಿಂಗಳಲ್ಲಿ 33,000 ಟನ್ ಜೈವಿಕ-ವೈದ್ಯ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ತಿಳಿಸಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಮಾಣದ 3,587ಟನ್‌ತ್ಯಾಜ್ಯ ಉತ್ಪತ್ತಿಯಾಗಿದೆ. ಅಕ್ಟೋಬರ್‌ನಲ್ಲಿ ಗರಿಷ್ಠ ಪ್ರಮಾಣ, 5,500ಟನ್‌ದತ್ಯಾಜ್ಯಉತ್ಪತ್ತಿಯಾಗಿದೆ. Courtesyg: Google (photo)
ವುಹಾನ್: ವೈರಸ್ ಮೂಲ ಇನ್ನೂ ನಿಗೂಢ
ಚೀನಾದ ವುಹಾನ್‌ನಲ್ಲಿ ಕೋವಿಡ್‌ಗೆ ಮೊದಲ ಬಲಿ ಸಂಭವಿಸಿ ಒಂದು ವರ್ಷವಾಗಿದ್ದು, ವೈರಸ್‌ನ ಮೂಲ ಕುರಿತ ನಿಖರ ಉತ್ತರ ಸಿಕ್ಕಿಲ್ಲ. ವುಹಾನಿನ ಮಾಂಸದ ಮಾರ್ಕೆಟ್‌ಗೆ ಹೋಗುತ್ತಿದ್ದ 61ರ ಹರೆಯದ ವ್ಯಕ್ತಿ ಕಳೆದ ಜ.೧೧ರಂದು ಮೃತಪಟ್ಟಿದ್ದರು. ಆನಂತರ ವೈರಸ್ ಜಗತ್ತನ್ನೇ ವ್ಯಾಪಿಸಿದೆ. ರೂಪಾಂತರಗೊAಡು ಪ್ರಪಂಚವನ್ನು ನಡುಗಿಸಿದೆ. ಕೊರೊನಾ ವೈರಸ್ ಕಾಣಿಸಿಕೊಂಡ ಬಗೆ, ಪ್ರಸರಣ, ತಡೆಗಟ್ಟುವ ವಿಧಾನ ಕುರಿತು ಚೀನಾ ಗೋಪ್ಯತೆ ಕಾಪಾಡಿಕೊಂಡಿದೆ. ಯಾವುದೇ ಮಾಹಿತಿ ನೀಡುತ್ತಿಲ್ಲ. ವೈರಸ್ ಮೂಲದ ಪ್ರಶ್ನೆ ವಿಜ್ಞಾನ ಜಗತ್ತಿಗೆ ಕಬ್ಬಿಣ ಕಡಲೆಯಾಗೇ ಉಳಿದಿದೆ. Courtesyg: Google […]
ಎಫ್‌ಎಂಸಿಜಿ ಉತ್ಪನ್ನ ತುಟ್ಟಿ ಸಾಧ್ಯತೆ
ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಬಳಕೆ ವಸ್ತು(ಎಫ್‌ಎಂಸಿಜಿ)ಗಳ ಉತ್ಪಾದಕ ಕಂಪನಿಗಳು ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಇದಕ್ಕೆ ಕಾರಣ. ಕೊಬ್ಬರಿ, ತಾಳೆ ಎಣ್ಣೆ ಮತ್ತಿತರ ಖಾದ್ಯ ತೈಲಗಳ ಬೆಲೆ ಹೆಚ್ಚಳದ ಹೊರೆಯನ್ನು ಎಫ್‌ಎಂಸಿಜಿ ಕಂಪನಿಗಳು ತಾವೇ ಹೊತ್ತುಕೊಂಡಿದ್ದವು. ಆದರೆ, ಇದರಿಂದ ಲಾಭ ಕಡಿಮೆಯಾಗುತ್ತಿರುವುದರಿಂದ, ಹಾಲಿ ಬೆಲೆಗೆ ಮಾರಾಟ ಕಷ್ಟವಾಗುತ್ತಿದೆ. ಸಫೋಲಾ ಮತ್ತು ಪ್ಯಾರಾಚೂಟ್ ಬ್ರ್ಯಾಂಡ್ ಉತ್ಪಾದಕ ಕಂಪನಿ ಮಾರಿಕೋ ಈಗಾಗಲೇ ಬೆಲೆ ಹೆಚ್ಚಳ ಮಾಡಿದ್ದು, ಡಾಬರ್, ಪಾರ್ಲೆ, ಪತಂಜಲಿ ಮತ್ತಿತರ ಕಂಪನಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ. […]
ಅನರ್ಹರಿಗೂ ಕಿಸಾನ್ ಸಮ್ಮಾನ್!
ಸರ್ಕಾರದ ಹಣ ಸೋರಿಕೆಯಾಗುವುದು, ಅಪಾತ್ರರಿಗೆ ಸಂದಾಯ ಆಗುವುದು ಆಶ್ರ‍್ಯಪಡಬೇಕಾದ ವಿಷಯವೇನಲ್ಲ. ಸೋರಿಕೆಯ ಇನ್ನೊಂದು ಪ್ರಕರಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ(ಪಿಎಂಕೆವೈ)ಯಡಿ 20.48 ಲಕ್ಷ ಅನರ್ಹರಿಗೆ 1,364.12 ಕೋಟಿ ರೂ. ಪ್ರೋತ್ಸಾಹಧನ ಪಾವತಿ ಮಾಡಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ಪ್ರೋತ್ಸಾಹಧನ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಗೆ 2019ರಲ್ಲಿ ಚಾಲನೆ ನೀಡಲಾಗಿದೆ. ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ ವೆಂಕಟೇಶ ನಾಯಕ್ ಎಂಬುವರು ಯೋಜನೆ ಕುರಿತು ಮಾಹಿತಿ ಕೋರಿ, ಆರ್‌ಟಿಐ […]
ರಾಷ್ಟ್ರೀಯ ಉದ್ಯೋಗ ನೀತಿಗೆ ಅಸ್ತಿಭಾರ
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಡಿಸೆಂಬರ್‌ಗೆ ಮುನ್ನವೇ ರಾಷ್ಟ್ರೀಯ ಉದ್ಯೋಗ ನೀತಿಗೆ ಅಂತಿಮರೂಪ ನೀಡುವ ನಿರೀಕ್ಷೆಇದೆ. ಕೌಶಲ ಅಭಿವೃದ್ಧಿ, ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳಲ್ಲಿ ಹೂಡಿಕೆ ಹೆಚ್ಚಳ ಮತ್ತು ನೀತಿ ನಿರೂಪಣೆ ಬದಲಾವಣೆ ಇತ್ಯಾದಿ ಮೂಲಕ ಉದ್ಯೋಗಾವಕಾಶ ಹೆಚ್ಚಳ ಎನ್‌ಇಪಿ ಗುರಿ. ಸಂಸತ್ತು ಕಳೆದ ವರ್ಷ ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ, ಕೆಲಸದ ಸ್ಥಳದಲ್ಲಿ ಆರೋಗ್ಯ ರಕ್ಷಣೆ ಮತ್ತು ಕೆಲಸದ ಸ್ಥಿತಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ಅನುಮೋದಿಸಿದೆ. ವೇತನ ಸಂಹಿತೆ ಕೂಡ ಸಂಸತ್ತಿನ ಅನುಮೋದನೆ ಪಡೆದುಕೊಂಡಿದೆ. […]
ವಿದ್ಯಾರ್ಥಿಗಳಿಗೆ ಉಚಿತ ಡೇಟಾ
ತಮಿಳುನಾಡಿನ 9.69 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ದಿನ 2 ಜಿಬಿ ಡೇಟಾ ನೀಡಲು ಸರ್ಕಾರ ನಿರ್ಧರಿಸಿದೆ. ಕೋವಿಡ್‌ನಿಂದ ಅನೇಕ ತಿಂಗಳು ತರಗತಿಗಳು ನಡೆದಿಲ್ಲ. ಈಗ ಆನ್‌ಲೈನ್‌ಮೂಲಕ ಪಾಠ ನಡೆಯುತ್ತಿರುವುದರಿಂದ ಏಪ್ರಿಲ್‌ವರೆಗೆ ಉಚಿತ ಡೇಟಾ ನೀಡಲಾಗುತ್ತದೆ. ಸರ್ಕಾರಿ, ಅನುದಾನಿತಕಾಲೇಜುಗಳ 9,69,047 ವಿದ್ಯಾರ್ಥಿಗಳಿಗೆ ಡೇಟಾ ಕಾರ್ಡ್ ವಿತರಿಸಲಾಗುತ್ತದೆ. Courtesyg: Google (photo)
ಎಫ್‌ಪಿಐ ಹೂಡಿಕೆ ಏರಿಕೆ
ವಿದೇಶಿ ಬಂಡವಾಳ ಹೂಡಿಕೆದಾರರು ದೇಶಿ ಮಾರುಕಟ್ಟೆಯಲ್ಲಿ ಜ.1-8ರ ಅವಧಿಯಲ್ಲಿ 5,156 ಕೋಟಿರೂ.ಹೂಡಿಕೆಮಾಡಿದ್ದು, ಇದರಲ್ಲಿ ಷೇರುಗಳಖರೀದಿಗೆ೪,೮೧೯ಕೋಟಿರೂ.ಹಾಗೂಸಾಲಪತ್ರಗಳಖರೀದಿಗೆ೩೩೭ಕೋಟಿರೂ. ತೊಡಗಿಸಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇದೆ. ದೇಶಕ್ಕೆ ಬಂಡವಾಳ ಒಳಹರಿವುಹೆಚ್ಚಾಗಲುಇದುಪ್ರಮುಖಕಾರಣಎಂದುಗ್ರೋವ್ ಸಹ ಸ್ಥಾಪಕ ಹರ್ಷ್ ಜೈನ್ ತಿಳಿಸಿದ್ದಾರೆ. ಭಾರತ, ಚೀನಾ, ರಷ್ಯಾ ಮತ್ತುದಕ್ಷಿಣಕೊರಿಯಾ ದೇಶಗಳು ಎಫ್‌ಪಿಐಗೆ ಪ್ರಮುಖ ತಾಣಗಳು ಎಂದುಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆತಜ್ಞ ವಿ.ಕೆ. ವಿಜಯ್‌ಕುಮಾರ್ ತಿಳಿಸಿದ್ದಾರೆ. Courtesyg: Google (photo)