ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಚೀನಾದ ಜಾಂಗ್ ಶನ್ಶನ್
ಚೀನಾದ ಬಿಲಿಯನೇರ್ ಉದ್ಯಮಿ ಜಾಂಗ್ ಶನ್ಶನ್ ಏಷ್ಯಾದ ಅತ್ಯಂತ ಶ್ರೀಮಂತನ ಪಟ್ಟಕ್ಕೇರಿದ್ದಾರೆ. ಭಾರತದ ಮುಖೇಶ್ ಅಂಬಾನಿ, ತಮ್ಮದೇ ದೇಶದ ಜಾಕ್ ಮಾ ಅವರನ್ನೂ ಹಿಂದಿಕ್ಕಿ ಈ ಸ್ಥಾನ ಅಲಂಕರಿಸಿದ್ದಾರೆ. 66 ವರ್ಷದ ಜಾಂಗ್ ಅವರ ನಿವ್ವಳ ಆಸ್ತಿ ಮೌಲ್ಯವು 2020 ರಲ್ಲಿ 70.9 ಬಿಲಿಯನ್ ಡಾಲರ್ಗಳಷ್ಟು ಏರಿಕೆಯಾಗಿ 77.8 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಹೇಳಿದೆ. ಈ ಪ್ರಕಾರ ಜಾಂಗ್ ಇದೀಗ ವಿಶ್ವದ 11 ನೇ ಶ್ರೀಮಂತ ವ್ಯಕ್ತಿ. ಜಾಂಗ್ ಚೀನಾದ ಅತಿದೊಡ್ಡ […]
ಜಿಯೊದಿಂದ ಜನವರಿಗೆ ಬಂಪರ್ ಕೊಡುಗೆ
ರಿಲಯನ್ಸ್ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್‌ಗಳಿಗೆ ಹೊಸ ವರ್ಷದಿಂದ ಎಲ್ಲ ಕರೆಗಳು ಉಚಿತವಾಗಿ ಲಭ್ಯವಾಗಲಿದೆ ಎಂದು ಜಿಯೊ ಗುರುವಾರ ಪ್ರಕಟಿಸಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನಗಳ ಪ್ರಕಾರದಂತೆ 2021ರ ಜನವರಿ ೧ರಿಂದ ಹೊಸ ಕ್ರಮಗಳನ್ನು ಜಿಯೊ ಅನುಷ್ಠಾನಗೊಳಿಸುತ್ತಿದ್ದು, ಎಲ್ಲ ದೇಶೀಯ ಧ್ವನಿ ಕರೆಗಳ ಮೇಲಿನ ಮೊಬೈಲ್ ನೆಟ್‌ವರ್ಕ್ ಅಂತರ್ ಸಂಪರ್ಕ ಬಳಕೆ ಶುಲ್ಕವನ್ನು ಕೊನೆಗೊಳಿಸಲಾಗುತ್ತಿದೆ. ಐಯುಸಿ ಕ್ರಮಗಳ ಅನುಸಾರ ಜನವರಿ 1ರಿಂದ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್ ಮಾಡುವ ವಾಯ್ಸ್ ಕಾಲ್‌ಗಳಿಗೆ ಶುಲ್ಕ ಇರುವುದಿಲ್ಲ. […]
ರೈತ ಹೋರಾಟ: ಸಿಗದ ಪರಿಹಾರ
ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ಆರನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಜನವರಿ ೪ರಂದು ಚರ್ಚೆ ಮುಂದುವರಿಯಲಿದೆ. ವಿದ್ಯುತ್ ದರ ಹೆಚ್ಚಳ ಹಾಗೂ ಕೃಷಿ ತ್ಯಾಜ್ಯ ದಹಿಸುವ ರೈತರಿಗೆ ದಂಡ ವಿಷಯದಲ್ಲಿ ಸಹಮತ ಏರ್ಪಟ್ಟಿದೆ. ಆದರೆ, ಕೃಷಿ ಮಾರುಕಟ್ಟೆ ಕಾಯ್ದೆಗಳ ರದ್ದು ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಬೇಕೆಂಬ ರೈತರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಸಿಕ್ಕಿಲ್ಲ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಚಿವರಾದ ಪೀಯೂಷ್ ಗೋಯಲ್ ಮತ್ತು ಸೋಮಪ್ರಕಾಶ್ […]
ಜೈವಿಕ ತಾಣವಾಗಿ ರೋರಿಚ್‌ಎಸ್ಟೇಟ್: ಶಿಫಾರಸು
ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ-ರೋರಿಚ್‌ಎಸ್ಟೇಟ್‌ನ್ನು ಪಾರಂಪರಿಕ ಜೈವಿಕ ತಾಣವೆಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಶಿಫಾರಸು ಮಾಡಿದೆ. ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ತಜ್ಞರು ಹಾಗೂ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡ ಡಿ.24 ರಂದು ಎಸ್ಟೇಟ್‌ಗೆ ಭೇಟಿ ನೀಡಿ, ಪರಿಸರ, ಜೀವವೈವಿಧ್ಯ ಕುರಿತು ಸಮೀಕ್ಷೆ ನಡೆಸಿ, ಸಿದ್ಧಪಡಿಸಿದ ವರದಿಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ಸಲ್ಲಿಸಲಾಗಿದೆÀ. ದೇವಿಕಾರಾಣಿ-ರೋರಿಚ್ ಎಸ್ಟೇಟ್ ರಾಜಧಾನಿಯ ಅದ್ಭುತ ಜೈವಿಕ ಭಂಡಾರವಾಗಿದ್ದು, 2002ರ ಜೀವವೈವಿಧ್ಯ ಕಾಯ್ದೆ ಅಡಿಯಲ್ಲಿ ಪಾರಂಪರಿಕ ತಾಣ ಎಂದು […]
ಜಾಯಿಕಾಯಿ, ಜಾಪತ್ರೆ ಬೆಲೆ ಹೆಚ್ಚಳ
ಸಾಂಬಾರ ಪದಾರ್ಥಗಳಾದ ಜಾಯಿಕಾಯಿ ಹಾಗೂ ಜಾಯಿಪತ್ರೆ ಬೆಲೆ ಹೆಚ್ಚಳಗೊಂಡಿದೆ. ಕೆಜಿಗೆ 200-220 ರೂ. ಆಸುಪಾಸಿನಲ್ಲಿರುತ್ತಿದ್ದ ಕೋಶಸಹಿತ ಜಾಯಿಕಾಯಿ ಬೆಲೆ, 300ರೂ. ಆಗಿದೆ. ಕೇರಳದಲ್ಲಿ ಕೋಶರಹಿತ ಜಾಯಿಕಾಯಿ ದರ 600 ರೂ.ಮುಟ್ಟಿದೆ. ಜಾಯಿಪತ್ರೆ ಬೆಲೆ ಕೆ.ಜಿ.ಗೆ 700-1,250 ರೂ.ನಿಂದ 1,800-2,000 ರೂ. ಹೆಚ್ಚಳಗೊಂಡಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕಿನ ಕೆಲ ಭಾಗ ಹಾಗೂ ಶಿರಸಿ, ಸಾಗರ ತಾಲೂಕಿನ ಹಲವೆಡೆ ಅಡಕೆ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುವ ಜಾಯಿಕಾಯಿಗೆ ಬೇಡಿಕೆ ಹೆಚ್ಚಿದೆ. Courtesyg: Google (photo)
ತುಮಕೂರಿನಲ್ಲಿ ಕೈಗಾರಿಕಾ ಪಾರ್ಕ್
ತುಮಕೂರು ಮತ್ತು ಆಂಧ್ರಪ್ರದೇಶದ ಕೃಷ್ಣಪಟ್ಟಣದಲ್ಲಿ ಕೈಗಾರಿಕೆ ಕಾರಿಡಾರ್ ಸ್ಥಾಪನೆ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ತುಮಕೂರು ಕೈಗಾರಿಕಾ ಪ್ರದೇಶವನ್ನು ಅಂದಾಜು1,702 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 88,500 ಜನರಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆ ಇದೆ. ಕೃಷ್ಣಪಟ್ಟಣದ ಕೈಗಾರಿಕಾ ಪ್ರದೇಶವು2,139ಕೋಟಿರೂ.ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, 98 ಸಾವಿರಜನರಿಗೆಉದ್ಯೋಗಕಲ್ಪಿಸುವ ನಿರೀಕ್ಷೆಇದೆ. ಈ ಎರಡೂ ಕೈಗಾ ರಿಕಾ ಪ್ರದೇಶಗಳಿಗೆ ವಿಶ್ವದರ್ಜೆಯ ಮೂಲ ಸೌಕರ್ಯ, ಬಂದರುಗಳಿಂದ ಸರಕು ಸಾಗಣೆಗೆರಸ್ತೆಮತ್ತುರೈಲು ಸಂಪರ್ಕ ಹಾಗೂ ಇಂಧನ ಪೂರೈಕೆ ಮಾಡಲಾಗುತ್ತದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು. Courtesyg: […]
ಆದಾಯ ತೆರಿಗೆ: ಗಡುವು ವಿಸ್ತರಣೆ
ವೈಯಕ್ತಿಕ ಆದಾಯ ತೆರಿಗೆ ಸಲ್ಲಿಕೆ ಗಡುವನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರ, ಜ.10ರವರೆಗೆ ಹಾಗೂ ಖಾತೆಗಳ ಲೆಕ್ಕ ಪರಿಶೋಧನೆ ನಡೆಸಬೇಕಿರುವ ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ಫೆ. 15 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ವೈಯಕ್ತಿಕ ಆದಾಯ ತೆರಿಗೆ ವಿವರ ಸಲ್ಲಿಸಲು ಡಿ.31 ಹಾಗೂ ಕಂಪನಿಗಳಿಗೆ ಜ.31 ಕಡೆಯ ದಿನವಾಗಿತ್ತು. 2019-20ನೇಸಾಲಿನಲ್ಲಿ 4.54 ಕೋಟಿಗಿಂತ ಅಧಿಕ ಆದಾಯ ತೆರಿಗೆವಿವರಗಳು ಡಿ.28ರವರೆಗೆ ಸಲ್ಲಿಕೆಯಾಗಿವೆ. Courtesyg: Google (photo)
ಸಿಇಟಿ ಕೌನ್ಸೆಲಿಂಗ್: ಜ.15ರವರೆಗೆ ವಿಸ್ತರಣೆ ಕೋರಿ ಪತ್ರ
ವೃತ್ತಿಪರ ಕೋರ್ಸ್ಗಳ ಖಾಲಿ ಉಳಿದ ಸೀಟುಗಳ ಪ್ರವೇಶಕ್ಕೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಅಗತ್ಯವಿದ್ದು, ಜ.15ರವರೆಗೆ ಕಾಲಾವಕಾಶ ನೀಡಬೇಕೆಂದು ಕೋರಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷರಿಗೆ ಉನ್ನತ ಶಿಕ್ಷಣ ಇಲಾಖೆ ಪತ್ರ ಬರೆದಿದೆ. ಉಳಿದ ವೃತ್ತಿಪರ ಸೀಟ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಹಾಗೂ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜ.15ರವರೆಗೆ ಕಾಲಾವಕಾಶ ವಿಸ್ತರಿಸಬೇಕೆಂದು ಕರ್ನಾಟಕಅನುದಾನರಹಿತ ಖಾಸಗಿ ಶೈಕ್ಷಣಿಕಕಾಲೇಜುಗಳ ಸಂಸ್ಥೆ ಕೋರಿದೆ. ಈ ಹಿನ್ನೆಲೆಯಲ್ಲಿ ಏಐಸಿಟಿಇಗೆ ಪತ್ರ ಬರೆಯಲಾಗಿದೆಎಂದುಉನ್ನತ ಶಿಕ್ಷಣ […]
ರೂಪಾಂತರ ಕೊರೊನಾ: 14 ಜನರಲ್ಲಿ ಪತ್ತೆ
ಬ್ರಿಟನ್‌ನಿಂದ ವಾಪಸಾದ 20 ಮಂದಿಯಲ್ಲಿ ರೂಪಾಂತರಗೊAಡ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿತರ ಸಹಪ್ರಯಾಣಿಕರು, ಕುಟುಂಬದವರು ಹಾಗೂ ಸ್ನೇಹಿತರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದೆ. ಪ್ರಯಾಣಿಕರ ವಿಮಾನಗಳ ಹಾರಾಟಕ್ಕೆ ನಿರ್ಬಂಧವನ್ನು ಜ.31ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಬುಧವಾರ ತಿಳಿಸಿದೆ. ಒಪ್ಪಿಗೆನೀಡಿರುವಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಮುಂದುವರಿಯಲಿದೆ. ಪಿಡುಗಿನಿAದಾಗಿ ಮಾ.23ರಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ವಂದೇ ಭಾರತ್ ಮಿಷನ್‌ನಡಿ ಮೇ ತಿಂಗಳಲ್ಲಿ ವಿದೇಶಗಳಿಗೆ […]