Author: Rutha Editor

Journalist,Translator,avid bibliophile

ಹವಾಮಾನ ಬದಲಾವಣೆ ಎಂಬ ತೂಗು ಕತ್ತಿ  ಪ್ಯಾರಿಸ್ ಒಪ್ಪಂದಕ್ಕೆ ಐದರ ಹರೆಯ

-ಮಾಧವ ಐತಾಳ್ ಜಗತ್ತಿನ 196 ದೇಶಗಳು ಐತಿಹಾಸಿಕ ಎನ್ನಬಹುದಾದ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ, ಐದು ವರ್ಷ ಸಂದಿದೆ. ಈ ದೇಶಗಳು ಜಾಗತಿಕ ತಾಪಮಾನ ಹೆಚ್ಚಳ 2100ರೊಳಗೆ 2 ಡಿಗ್ರಿ ಸೆಲ್ಸಿಯಸ್ ದಾಟದಂತೆ ನೋಡಿಕೊಳ್ಳಲು ಸಮ್ಮತಿಸಿದವು ಹಾಗೂ ಉಷ್ಣತೆ ಹೆಚ್ಚಳವನ್ನು ಕೈಗಾರಿಕಾ ಕ್ರಾಂತಿಯ ಮೊದಲಿಗಿಂತ 1.5ಡಿಗ್ರಿ ಸೆಲ್ಸಿಯಸ್ ಒಳಗೆ ಇರಿಸಲು ಪ್ರಯತ್ನಿಸುವುದಾಗಿ ಹೇಳಿಕೊಂಡವು. ಪ್ಯಾರಿಸ್ ಒಪ್ಪಂದ ಒಂದೆರಡು ದಿನದಲ್ಲಿ ಆಗಿದ್ದಲ್ಲ. ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಜಗತ್ತಿನಲ್ಲಿ 196 ದೇಶಗಳು 2016ರ ಡಿಸೆಂಬರ್ […]

ವಿಜ್ಞಾನಿ ರೊದ್ದಂ ನರಸಿಂಹ ಇನ್ನಿಲ್ಲ

ಖ್ಯಾತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ(87) ಡಿಸೆಂಬರ್ 14 ರಾತ್ರಿ ನಿಧನರಾಗಿದ್ದಾರೆ. ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. 1933ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನರಸಿಂಹ, ತಂದೆ ಹಾಗೂ ವಿಜ್ಞಾನ ಲೇಖಕ ಆರ್.ಎಲ್. ನರಸಿಂಹಯ್ಯ ಅವರಿಂದ ಬಾಲ್ಯದಿಂದಲೇ ಪ್ರಭಾವಿತರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌‌ನಲ್ಲಿ ಪದವಿ(1953), ಭಾರತೀಯ ವಿಜ್ಞಾನ ಸಂಸ್ಥೆಯಿAದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ(1955) ಮಾಡಿ, 1962ರಿಂದ1999ರವರೆಗೆ ಐಐಎಸ್‌ಸಿಯ ಏರೋಸ್ಪೇಸ್ ಎಂಜಿನಿಯರಿಂಗ್‌ನ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್‌ಎಎಲ್)ದ ನಿರ್ದೇಶಕ(1984-1993), 2000ರಿಂದ ೨೦೧೪ರವರೆಗೆ ಬೆಂಗಳೂರಿನ […]

ವೈಫೈ ಸೌಲಭ್ಯ: ಹೊಸ ಮಾರ್ಗಸೂಚಿ

ಪಿಎಂ ವಾಣಿ ಯೋಜನೆ(ಪಿಎಂ ವೈಫೈ ಅಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್) ಕುರಿತ ಮಾರ್ಗಸೂಚಿ ಪ್ರಕಟವಾಗಿದ್ದು, ಸಣ್ಣ ಅಂಗಡಿಗಳು ಕೂಡ ಸಾರ್ವಜನಿಕ ವೈಫೈ ಸೇವೆ ಒದಗಿಸಬಹುದಾಗಿದೆ. ಸೇವೆ ಕಲ್ಪಿಸುವ ಕಂಪನಿಯಿAದ ಬ್ಯಾಂಡ್‌ವಿಡ್ತ್ ಪಡೆದುಕೊಂಡು, ರೆಸ್ಟೋರೆಂಟ್, ಟೀ ಅಂಗಡಿ, ಹೋಟೆಲ್, ಕಿರಾಣಿ ಅಂಗಡಿ ಮತ್ತಿತರ ಕಡೆ ನೋಂದಣಿಯಿಲ್ಲದೆ ವೈಫೈ ಸೌಲಭ್ಯ ನೀಡಬಹುದು(ಪಿಡಿಒ). ಕೇಂದ್ರ ಸಚಿವ ಸಂಪುಟ ಕಳೆದ ವಾರ ದೇಶದೆಲ್ಲೆಡೆ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಉದ್ದೇಶವುಳ್ಳ ಪಿಎಂ ವಾಣಿ ಯೋಜನೆಗೆ ಅನುಮೋದನೆ ನೀಡಿತ್ತು. ಪಬ್ಲಿಕ್ ಡೇಟಾ ಆಫೀಸ್(ಪಿಡಿಒ), ಪಬ್ಲಿಕ್ ಡೇಟಾ […]

ಮಾರುತಿಯಿಂದ ಡೀಸೆಲ್ ಕಾರು?

ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪನಿಯಾದ ಮಾರುತಿ ಸುಜುಕಿ, ಡೀಸೆಲ್ ಕಾರು ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಡೀಸೆಲ್ ಕಾರುಗಳು, ಅದರಲ್ಲೂ ಎಸ್‌ಯುವಿಗಳಿಗೆ ಅಧಿಕ ಬೇಡಿಕೆ ಇರುವುದು ಇದಕ್ಕೆ ಕಾರಣ. Courtesyg: Google (photo)

ಭೂಮಿಗೆ ಪಯಣ ಬೆಳೆಸಿದ ಚಾಂಗಿ

ಚೀನಾದ ಚಾಂಗಿ-5 ಪ್ರೋಬ್ ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗೂ ಮಣ್ಣಿನ ಮಾದರಿಯನ್ನು ಸಂಗ್ರಹಿಸಿಕೊAಡು ಭೂಮಿಯತ್ತ ಪ್ರಯಾಣ ಬೆಳೆಸಿದೆ. ಡಿ.೧ರಂದು ಚಂದ್ರನ ಮೇಲ್ಮೈಯಲ್ಲಿ ಇಳಿದಿದ್ದ ಪ್ರೋಬ್, ಕಲ್ಲು ಹಾಗೂ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿಕೊAಡು, ಡಿ.೩ರಂದು ಪ್ರಯಾಣ ಆರಂಭಿಸಿತ್ತು. ಸಂಗ್ರಹಿಸಿದೆ. ಡಿಸೆಂಬರ್ 14ರ ಬೆಳಗ್ಗೆ ಪ್ರೋಬ್‌ನಲ್ಲಿರುವ ಎರಡು ಎಂಜಿನ್‌ಗಳನ್ನು 28 ಸೆಕೆಂಡ್ ಉರಿಸಲಾಗಿದ್ದು, ಭೂಮಿಗೆ ಹಿಂದಿರುಗುವ ಪಥಕ್ಕೆ ಪ್ರವೇಶಿಸಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ(ಸಿಎನ್‌ಎಸ್‌ಎ)ತಿಳಿಸಿದೆ. ಈ ತಿಂಗಳ ಕೊನೆಯ ವಾರ ಉತ್ತರ ಚೀನಾದ ಮಂಗೋಲಿಯದಲ್ಲಿ ಇಳಿಯುವ ನಿರೀಕ್ಷೆ ಇದೆ. […]

ಕೋವಿಡ್ ಲಸಿಕೆ:  ನೋಂದಣಿ ಕಡ್ಡಾಯ

ರಾಜ್ಯಗಳಿಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಮಾರ್ಗಸೂಚಿಯನ್ನು ರವಾನಿಸಿರುವ ಕೇಂದ್ರ ಸರ್ಕಾರ, ಮುಂಗಡವಾಗಿ ನೋಂದಾಯಿಸಿಕೊAಡವರಿಗೆ ಮಾತ್ರ ಕೋವಿಡ್ ನಿರೋಧಕ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದೆ. ಕೋವಿನ್(ಕೋವಿಡ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್‌ವರ್ಕ್) ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಒಂದು ಜಿಲ್ಲೆಗೆ ಒಂದೇ ಕಂಪನಿಯ ಲಸಿಕೆ ಪೂರೈಕೆ ಮಾಡಬೇಕು. ಲಸಿಕೆಯ ಬಳಕೆ ಅವಧಿ ಮುಕ್ತಾಯದ ದಿನಾಂಕ (ಎಕ್ಸ್ಪೈರಿ) ಇರುವುದಿಲ್ಲ. ಆರೋಗ್ಯ ಕಾರ್ಯಕರ್ತರು, ಪೊಲೀಸ್, ಅರೆ ಸೇನಾಪಡೆ ಸಿಬ್ಬಂದಿ ಮತ್ತಿತರರು, 50 ವರ್ಷ ದಾಟಿದವರು ಮತ್ತು ಬೇರೆ ರೋಗಗಳಿರುವ ಐವತ್ತು ವರ್ಷದೊಳಗಿನವರಿಗೆ ಮೊದಲು ಲಸಿಕೆ […]

ಓಲಾದಿಂದ ವಿದ್ಯುತ್ ಚಾಲಿತ ಸ್ಕೂಟರ್

ವಿದ್ಯುತ್‌ಚಾಲಿತ ಸ್ಕೂಟರ್ ತಯಾರಿಕೆ ಘಟಕ ಆರಂಭಿಸಲು ತಮಿಳುನಾಡು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಓಲಾ ತಿಳಿಸಿದೆ. ಘಟಕಕ್ಕೆ ಓಲಾ 2.400 ಕೋಟಿ ರೂ. ಹೂಡಿಕೆ ಮಾಡಲಿದ್ದು, ಇದು ವಿಶ್ವದ ಅತಿ ದೊಡ್ಡ ಇವಿ ತಯಾರಿಕೆ ಘಟಕ ಆಗಲಿದೆ. ರಾಜ್ಯದ ಗಡಿ ಭಾಗದ ಹೊಸೂರಿನಲ್ಲಿ ಸ್ಥಾಪನೆಯಾಗಲಿರುವ ಘಟಕ 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದ್ದು, ವಾರ್ಷಿಕ 20 ಲಕ್ಷ ಸ್ಕೂಟರ್ ಉತ್ಪಾದಿಸುವ ಗುರಿ ಹೊಂದಿದೆ. ಇದರಿಂದ ಇವಿ ವಾಹನಗಳ ಆಮದು ತಗ್ಗಲಿದೆ. ಸ್ಥಳೀಯ ಉತ್ಪಾದನೆ ಪ್ರಕ್ರಿಯೆಗೆ ಶಕ್ತಿ […]

ಏರ್ ಇಂಡಿಯಾ ಖರೀದಿಗೆ ಟಾಟಾ ಆಸಕ್ತಿ

ಟಾಟಾ ಸನ್ಸ್ ಕಂಪನಿ ಏರ್ ಇಂಡಿಯಾ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಕಂಪನಿಯನ್ನು ಆರಂಭಿಸಿದವರು ಉದ್ಯಮಿ ಜೆ.ಆರ್.ಡಿ.ಟಾಟಾ. 1953ರಲ್ಲಿ ಕೇಂದ್ರ ಸರ್ಕಾರ ಕಂಪನಿಯ ಬಹುಪಾಲು ಷೇರುಗಳನ್ನು ಖರೀದಿಸಿ, ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಸರಿ ಸುಮಾರು ಏಳು ದಶಕಗಳ ನಂತರ ಟಾಟಾ ಸಮೂಹ ಮತ್ತೊಮ್ಮೆ ಏರ್ ಇಂಡಿಯಾವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಯತ್ನಕ್ಕೆ ಮುಂದಾಗಿದೆ. ಟಾಟಾ ಸಮೂಹ ವಿಸ್ತಾರಾ ವಿಮಾನಯಾನ ಕಂಪನಿಯನ್ನು ನಡೆಸುತ್ತಿದೆ. ಏರ್ ಇಂಡಿಯಾ ಮಾರಾಟಕ್ಕೆ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. […]

Back To Top