ಬಿಎಸ್‌ಎಫ್ ಸೇವೆಗೆ ಮುಧೋಳ ತಳಿ ನಾಯಿ
ಭಾರತೀಯ ಸೇನೆ, ಸಶಸ್ತç ಸೀಮಾ ದಳ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಹಾಗೂ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಮುಧೋಳ ತಳಿಯ ಶ್ವಾನಗಳು ಈಗ ಗಡಿ ಭದ್ರತಾ ಪಡೆಗೂ ಸೇರ್ಪಡೆಯಾಗಲಿವೆ. ಬಿಎಸ್‌ಎಫ್ ಗಡಿಯಲ್ಲಿ ಪಹರೆಗೆ ಮುಧೋಳ ತಳಿ ನಾಯಿಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ನಾಲ್ಕು ಮರಿಗಳಿಗೆ ಬೇಡಿಕೆ ಸಲ್ಲಿಸಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಬಿಎಸ್‌ಎಫ್‌ನ ಅಸಿಸ್ಟೆಂಟ್ ಕಮಾಂಡೆAಟ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಅಕ್ಟೋಬರ್ 16ರಂದು ಮುಧೋಳ ತಾಲೂಕು ತಿಮ್ಮಾಪುರದಲ್ಲಿರುವ ಶ್ವಾನ ಸಂಶೋಧನಾ ಹಾಗೂ […]
ಸ್ತನ ಕ್ಯಾನ್ಸರ್ ಜಾಗೃತಿಗೆ “ನೋ ಬ್ರಾ ದಿನ’
ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ 13ನ್ನು “‘ನೋ ಬ್ರಾ ಡೇ’ ಎಂದು ಆಚರಿಸಲಾಗುತ್ತದೆ. ದೇಶದಲ್ಲಿ ಮಹಿಳೆಯರನ್ನು ಅತಿ ಹೆಚ್ಚು ಕಾಡುವ ಎರಡನೇ ವಿಧದ ಮುಖ್ಯ ಕ್ಯಾನ್ಸರ್ ಇದು. ಪ್ರತಿ ವರ್ಷ ಸುಮಾರು 1.6ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು ಐಸಿಎಂಆರ್ ಅಂದಾಜಿಸಿದೆ. ಕಾಲಕಾಲಕ್ಕೆ ಸ್ತನ ಪರೀಕ್ಷೆ, ತಪಾಸಣೆ ಮಾಡಿಸಿಕೊಂಡು, ಸ್ತನದಲ್ಲಿ ಸಣ್ಣಪುಟ್ಟ ವ್ಯತ್ಯಾಸದ ಕಂಡುಬAದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು ಎಂದು ಮನವರಿಕೆ ಮಾಡುವುದು ಈ ದಿನದ ಆಚರಣೆಯ ಉದ್ದೇಶ. ಕ್ಯಾನ್ಸರ್‌ನಿಂದಾಗಿ ಶಸ್ತçಚಿಕಿತ್ಸೆಯಿಂದ ಸ್ತನ […]
ಭೂಮಿಗೆ ಹತ್ತಿರ ಬಂದ ಮಂಗಳ ಗ್ರಹ
ಅ.13ರಂದು ಮಂಗಳಗ್ರಹ ಭೂಮಿಗೆ ಹತ್ತಿರವಾಗಿ ಕಾಣಲಿದೆ. 2 ವರ್ಷ 2 ತಿಂಗಳಿಗೊಮ್ಮೆ ನಡೆಯುವ ಈ ಘಟನೆಯಲ್ಲಿ 6 ಕೋಟಿ 20 ಲಕ್ಷ ಕಿ.ಮೀ ದೂರದಲ್ಲಿ ಮಂಗಳ ಕಾಣಿಸಲಿದ್ದು, ವಾರವಿಡೀ ಬರಿಗಣ್ಣಿಗೆ ಗೋಚರಿಸಲಿದೆ. ಇದಕ್ಕೆ ಮಾರ್ಸ್ ಒಪೋಸಿಷನ್ (ಮಂಗಳನ ವಿಯುತಿ) ಎನ್ನುತ್ತಾರೆ. ಕೆಂಡದAತೆ ಕಾಣುವ ಕಾರಣಕ್ಕೆ ಮಂಗಳ ಗ್ರಹಕ್ಕೆ ಅಂಗಾರಕ ಎಂಬ ಹೆಸರು ಬಂದಿದೆ. ಇಂಥ ಘಟನೆ ಮತ್ತೆ ಸಂಭವಿಸುವುದು 2.035ರಲ್ಲಿ. ಈ ಹಿಂದೆ ೨೦೦೩ ಹಾಗೂ ೨೦೧೮ ರಲ್ಲಿ ಭೂಮಿಗೆ ಹತ್ತಿರದಲ್ಲಿ ಮಂಗಳ ಗ್ರಹ ಗೋಚರಿಸಿತ್ತು. ಸೌರವ್ಯೂಹದ […]
ತೊಗರಿ ಬೇಳೆ ದರ ದಿಢೀರ್ ಹೆಚ್ಚಳ
ತೊಗರಿಬೇಳೆ ದರ ದಿಢೀರ್ ಏರಿಕೆಯಾಗಿದ್ದು, ಕೆ.ಜಿ.ಗೆ ಸರಾಸರಿ 125 ರೂ. ಆಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಮತ್ತು ತೊಗರಿಬೇಳೆ ಉತ್ಪಾದಿಸುವ ಕಲಬುರ್ಗಿಯಲ್ಲೇ ವರ್ತಕರು ಬೇಳೆಯನ್ನು 140 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ತೊಗರಿಕಾಳಿನ ದಾಸ್ತಾನು ಕಡಿಮೆ ಇರುವುದರಿಂದ ಬೇಡಿಕೆಯಷ್ಟು ಬೇಳೆ ಪೂರೈಕೆ ಇಲ್ಲ. ಪ್ರಸಕ್ತ ಹಂಗಾಮು ಡಿಸೆಂಬರ್ ವೇಳೆಗೆ ಆರಂಭಗೊಳ್ಳಲಿದೆ. ರೈತರ ಬಳಿಯೂ ತೊಗರಿಕಾಳಿನ ದಾಸ್ತಾನು ಇಲ್ಲ. ಸೋಮವಾರ ರಾಜ್ಯದ ಒಂಬತ್ತು ಎಪಿಎಂಸಿಗಳಿಗೆ ಒಟ್ಟು 885 ಕ್ವಿಂಟಲ್ ತೊಗರಿಕಾಳು ಹಾಗೂ ಶಿವಮೊಗ್ಗ ಎಪಿಎಂಸಿಗೆ ಕೇವಲ 40 […]
Eco Noble for duo
Two US economists, Paul R Milgrom and Robert B Wilson, were awarded the Nobel Memorial Prize in Economic Sciences on Monday for improvements to auction theory and inventions of new auction formats innovations that have had huge practical applications when it comes to allocating scarce resources. The pair, close collaborators who are both affiliated with […]
Ready revival plan for Vidyagama:Minister
Primary and Secondary Education Minister S.Suresh Kumar said on Monday that his department was collecting data related to Vidyagama continuous education programme conducted through government schools and it’s now onpause due to rising Covid-19 cases and will decide on bettering the programme. “We will definitely prepare a revival plan since learning must happen. We will […]
ಆರ್‌ಬಿಐ ತೀರ್ಮಾನ ಜೈ ಎಂದ ಬ್ಯಾಂಕಿಂಗ್ ವಲಯ……
ನವದೆಹಲಿ (ಪಿಟಿಐ): ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸುತ್ತಲೇ ಬೆಳವಣಿಗೆಯನ್ನೂ ಸಾಧಿಸುವ ಉದ್ದೇಶದಿಂದ ಆರ್‌ಬಿಐ ರೆಪೊ ದರವನ್ನು ಬದಲಾಯಿಸದೆ, ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿದೆ ಎಂಬ ಅಭಿಪ್ರಾಯವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. ಈಗಿನ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಆರ್‌ಬಿಐ ಈ ನಿರ್ಧಾರಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಆರ್‌ಬಿಐ ಶುಕ್ರವಾರ ತೆಗೆದುಕೊಂಡ ತೀರ್ಮಾ ನವು ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ನಗದು ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದ್ದಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞ ಅಭೀಕ್ ಬರುವಾ ಹೇಳಿದ್ದಾರೆ. […]
ಯಕ್ಷಗಾನ ಪ್ರಿಯರಿಗೆ ಆನ್‌ಲೈನ್ ಸಾಥ್!
ಯಕ್ಷಗಾನವೆಂದರೆ ಮನಸ್ಸು ಹುಚ್ಚೆದ್ದು ಕುಣಿಯುವ ಯಕ್ಷಗಾನ ಪ್ರೇಮಿಗಳಿಗೆ ಕೋವಿಡ್ ದಿನಗಳು ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಆದರೂ, ಸಾಲು ಸಾಲು ಯಕ್ಷಗಾನ ಕಾರ್ಯಕ್ರಮಗಳು ಆನ್ಲೈನ್ನಲ್ಲೇ ‘ಲೈವ್’ ಪ್ರದರ್ಶನ ಕಂಡಿವೆ. ವೃತ್ತಿ ಮೇಳಗಳು ತಿರುಗಾಟ ನಿಲ್ಲಿಸಬೇಕಾಗಿ ಬಂದಾಗ ಯಕ್ಷಗಾನ ಪ್ರೇಕ್ಷಕರಿಗೆ ಆಸರೆಯಾಗಿದ್ದು ಆನ್ಲೈನ್. ಬಡಗುತಿಟ್ಟಿನ ಮೊದಲ ಆನ್‌ಲೈನ್ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ ಹೆಗ್ಗಳಿಕೆಯ ಬೆಂಗಳೂರಿನ ‘ಟೀಂ ಉತ್ಸಾಹಿ’, ಒಂದು ಹೆಜ್ಜೆ ಮುಂದೆ ಹೋಗಿ, ಯಕ್ಷಗಾನ ಗುರುಗಳಿಗೆ ಸನ್ಮಾನವನ್ನೂ ಏರ್ಪಡಿಸಿತ್ತು, ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದೆ. ತಿಂಗಳಿಗೆ ಕನಿಷ್ಠ ಎರಡು ಪ್ರದರ್ಶನಗಳನ್ನು ಆನ್‌ಲೈನ್‌ನಲ್ಲೇ […]
ಈ ಬಾರಿ ದಸರಾಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ….
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ ಹಾವಳಿಯಿಂದ ಈ ಬಾರಿ ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡಬಾರದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಶಿಫಾರಸು ಮಾಡಿದೆ. ಅ.17ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆಗೆ 200 ಜನ, ಅ.26ರಂದು ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ 300 ಜನರಿಗೆ ಪ್ರವೇಶ ನೀಡಬೇಕೆಂದು ನಿರ್ಧಾರಿಸಲಾಗಿದೆ. ಗಣ್ಯರು, ಸಿಬ್ಬಂದಿ, ಕಲಾವಿದರು ಹಾಗೂ ಭದ್ರತಾ ಸಿಬ್ಬಂದಿ ಕೂಡ ಈ ಸಂಖ್ಯೆಯಲ್ಲಿ ಸೇರಿದ್ದಾರೆ. ವರ್ಚುಯಲ್ (ಆನ್‌ಲೈನ್) ಆಗಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು’ […]