ಲಿಚ್ಚಿ ರೂಪದ ಮೃತ್ಯು?
ಇತ್ತಿಚೆಗಷ್ಟೇ ಲಿಚ್ಚಿ ಹಣ್ಣು ಮಕ್ಕಳ ಸಾವಿಗೆ ಕಾರಣವಾಗಿ ಇನ್ನಿಲ್ಲದ ಸುದ್ದಿಯಾಗಿತ್ತು. ಮೆಥಿಲೀನ್ ಸೈಕ್ಲೋಪ್ರೊಪೈಲ್ ಗ್ಲೈಸೀನ್(ಎಂಸಿಪಿಜಿ) ಏಕೆ ಲಿಚ್ಚಿ ರೂಪದಲ್ಲಿ ಕಾಡಿತ್ತು? ಬಿಹಾರದ ಮುಜಫ್ಫರ್‌ನಗರ, ವೈಶಾಲಿ, ಶೋಹರ್ ಮತ್ತು ಪೂರ್ವ ಚಂಪಾರಣ್‌ನಲ್ಲಿ ತೀವ್ರ ಎನ್ಸೆಫಾಲೈಟಿಸ್ ಸಿಂಡ್ರೋಮ್(ಎಇಎಸ್) ಪ್ರತಿ ವರ್ಷ ಬಡ ಮಕ್ಕಳ ಜೀವಹರಣ ಮಾಡುತ್ತಿದೆ. ಇದಕ್ಕೆ ಕಾರಣ ಗೊತ್ತಿದ್ದರೂ, ಎಲ್ಲರೂ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. -ಆಗಸ್ಟ್ 2018 ಸಂಚಿಕೆ 03, ಪುಟ 82
ಆರೋಗ್ಯ ರಕ್ಷಣೆ, ಪರಿಸರ ಸಾಧನೆ ಎರಡರಲ್ಲೂ ಹಿಂದೆ!-
ಜಗತ್ತಿನಲ್ಲಿ ಆರೋಗ್ಯ ಸೇವೆಗಳ ಕುರಿತು ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ ವರದಿ ಪ್ರಕಾರ, ಭಾರತ 145ನೇ ಸ್ಥಾನದಲ್ಲಿದೆ. ದೇಶದ ಪಟ್ಟಿಯಲ್ಲಿ ಗೋವಾ ಮತ್ತು ಕೇರಳ ಉತ್ತಮ ಹಾಗೂ ಟತಿ ಹೆಚ್ಚು ವೈದ್ಯ ಕಾಲೇಜುಗಳಿರು ಕರ್ನಾಟಕದ ಸಾಧನೆ ಕಳಪೆಯಾಗಿದ್ದು, 16ನೇ ಸ್ಥಾನದಲ್ಲಿದೆ. ಆರೋಗ್ಯ ಕ್ಷೇತ್ರಕ್ಕೆ ದೇಶಿ ಬಕೆಟ್‌ನಲ್ಲಿ ಮೀಸಲಿಡುತ್ತಿರುವ ಅನುದಾನ ಶೇ.೧.೧೫ ಇದು ಕನಿಷ್ಠ ಶೇ.೫ ರಷ್ಟು ಇರಬೇಕುಎನ್ನುವುದು ತಜ್ಞರ ಅಭಿಮತ. 15 ಜೂನ್2018 ಸಂಚಿಕೆ-24 ಪುಟ-66

