ಆರೋಗ್ಯ: ವಿಷನ್ ಗ್ರೂಪ್ ರಚನೆ
ಆರೋಗ್ಯ ಮತ್ತು ವೈದ್ಯ ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಸಲಹೆ ಹಾಗೂ ಶಿಫಾರಸುಗಳನ್ನು ಪಡೆಯಲು ಸರ್ಕಾರ ನಿಮ್ಹಾನ್ಸ್ ನಿರ್ದೇಶಕ ಡಾ.ಜಿ. ಗುರುರಾಜ್ ಅಧ್ಯಕ್ಷತೆಯಲ್ಲಿ ವಿಷನ್ ಗ್ರೂಪ್ ರಚಿಸಿದೆ. ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಆವಿಷ್ಕಾರಗಳನ್ನು ವಿಷನ್ ಗ್ರೂಪ್ ಸರ್ಕಾರದ ಗಮನಕ್ಕೆ ತರಲಿದೆ. ನಾನಾ ಆರೋಗ್ಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ಗುಣಾತ್ಮಕ ಬದಲಾವಣೆಗೆ ಸಲಹೆ ನೀಡಲಿದೆ. ಆರೋಗ್ಯ ಮತ್ತು ವೈದ್ಯ ಶಿಕ್ಷಣ ಇಲಾಖೆ ನಡುವೆ ಸಂಯೋಜನೆಯಲ್ಲದೆ, ಗುಣಮಟ್ಟದ ಆರೋಗ್ಯ ಸೇವೆಗೆ ಸಂಬAಧಿಸಿದAತೆ ಶಿಫಾರಸು ಮಾಡಲಿದೆ. ಸಮಿತಿಯಲ್ಲಿ […]
ರೂಪಾಂತರ ಕೊರೊನಾ: ಸೋಂಕಿತರ ಸಂಖ್ಯೆ ೩೩
ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರ ಪೈಕಿ ಇನ್ನಿಬ್ಬರು ಕೋವಿಡ್ ಪೀಡಿತರಾಗಿದ್ದು, ಸೋಂಕಿತÀರ ಸಂಖ್ಯೆ ೩೩ ಕ್ಕೆ ಏರಿಕೆಯಾಗಿದೆ. ನೂರಕ್ಕೂ ಅಧಿಕ ಮಂದಿ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಬ್ರಿಟನ್‌ನಿಂದ ವಾಪಸಾದವರಲ್ಲಿ ೬೩ ಮಂದಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿದ್ದು, ಅದರಲ್ಲಿ ಇಬ್ಬರ ವರದಿ ಮಾತ್ರ ಬಂದಿದೆ. ವಾಪಸಾದವರಲ್ಲಿ ೨,೦೨೮ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಅವರಲ್ಲಿ ೧,೮೮೭ ಮಂದಿಗೆ ಸೋಂಕು ತಗುಲಿಲ್ಲ. ಇನ್ನೂ ೧೦೮ ಮಂದಿಯ ವರದಿ ಬರಬೇಕಿದೆ. ನಾನಾ ದೇಶಗಳಿಂದ ಆಗಮಿಸಿದ ೭೯೭ ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. […]
ಹೊಸ ವರ್ಷಕ್ಕೆ ಲಸಿಕೆ ಸಾಧ್ಯತೆ
ಹೊಸ ವರ್ಷದಲ್ಲಿ ಕೋವಿಡ್ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಭಾರತೀಯ ಔಷಧ ಮಹಾ ನಿಯಂತ್ರಕ ವಿ.ಜಿ. ಸೊಮಾನಿ ಸುಳಿವು ನೀಡಿದ್ದಾರೆ. ತಮ್ಮ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಸೀರಂ ಇನ್ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಹಾಗೂ ಫೀಜರ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪ್ರಾಯಶಃ ಇಂದು(ಶುಕ್ರವಾರ) ಅಂತಿಮ ತೀರ್ಮಾನ ಬರಲಿದೆ. ಜ.೨ರಂದು ಕೋವಿಡ್ ಲಸಿಕೆ ಅಣಕು ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಮುಂದಿನ ತಿಂಗಳುಗಳಲ್ಲಿ […]
ರೂಪಾಂತರ ಕೊರೊನಾ: 14 ಜನರಲ್ಲಿ ಪತ್ತೆ
ಬ್ರಿಟನ್‌ನಿಂದ ವಾಪಸಾದ 20 ಮಂದಿಯಲ್ಲಿ ರೂಪಾಂತರಗೊAಡ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿತರ ಸಹಪ್ರಯಾಣಿಕರು, ಕುಟುಂಬದವರು ಹಾಗೂ ಸ್ನೇಹಿತರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದೆ. ಪ್ರಯಾಣಿಕರ ವಿಮಾನಗಳ ಹಾರಾಟಕ್ಕೆ ನಿರ್ಬಂಧವನ್ನು ಜ.31ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಬುಧವಾರ ತಿಳಿಸಿದೆ. ಒಪ್ಪಿಗೆನೀಡಿರುವಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಮುಂದುವರಿಯಲಿದೆ. ಪಿಡುಗಿನಿAದಾಗಿ ಮಾ.23ರಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ವಂದೇ ಭಾರತ್ ಮಿಷನ್‌ನಡಿ ಮೇ ತಿಂಗಳಲ್ಲಿ ವಿದೇಶಗಳಿಗೆ […]
ಹೊಸ ವೈರಸ್: ಆರು ಮಂದಿಯಲ್ಲಿ ಪತ್ತೆ
ಬ್ರಿಟನ್‌ನಿಂದ ಹಿಂದಿರುಗಿದ್ದ ಆರು ಜನರಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ದೃಢಪಟ್ಟಿದೆ. ರೂಪಾಂತರಗೊAಡ ಕೊರೊನಾ ವೈರಸ್‌ನ ಪತ್ತೆಗೆ ಸ್ಥಾಪನೆಯಾದ 10 ಪ್ರಯೋಗಾಲಯಗಳಲ್ಲಿ ನಿಮ್ಹಾನ್ಸ್ನ ಪ್ರಯೋಗಾಲಯದಲ್ಲಿ ಮೂವರು, ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ಇಬ್ಬರು ಮತ್ತು ಪುಣೆಯ ಪ್ರಯೋಗಾಲಯದಲ್ಲಿ ಒಬ್ಬರಲ್ಲಿ ರೂಪಾಂತರ ಕೊರೊನಾ ವೈರಸ್ ದೃಢಪಟ್ಟಿದೆ. ಆರು ಮಂದಿಯನ್ನೂ ನಿಗದಿತ ಆಸ್ಪತ್ರೆಗಳ ಐಸೊಲೇಷನ್ ಘಟಕದಲ್ಲಿ ಇರಿಸಲಾಗಿದೆ. ಡಿಸೆಂಬರ್ 9ರಿಂದ 22ರ ಅವಧಿಯಲ್ಲಿ ಬ್ರಿಟನ್‌ನಿಂದ ವಾಪಸಾದವರಿಗೆ ರೂಪಾಂತರ ವೈರಸ್ ಪತ್ತೆ ಪರೀಕ್ಷೆ ಕಡ್ಡಾಯಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಬ್ರಿಟನ್‌ನಿಂದ ಬಂದವರನ್ನು ಪತ್ತೆ […]
ಹೊಸ ವೈರಸ್ ವಿರುದ್ಧವೂ ಕೋವ್ಯಾಕ್ಸಿನ್ ರಕ್ಷಣೆ
ರೂಪಾಂತರಗೊAಡಿರುವ ಕೊರೊನಾ ವೈರಸ್‌ನ ಸೋಂಕಿನ ವಿರುದ್ಧವೂ ಕೋವ್ಯಾಕ್ಸಿನ್ ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಹೇಳಿದ್ದಾರೆ. ಕೊರೊನಾ ವೈರಸ್ ಹಲವು ಬಾರಿ ರೂಪಾಂತರಗೊಳ್ಳಲಿದೆ ಎನ್ನಲಾಗುತ್ತಿದೆ. ಯಾವುದೇ ರೂಪ ಪಡೆದರೂ, ಕೋವ್ಯಾಕ್ಸಿನ್ ರಕ್ಷಣೆ ಒದಗಿಸಲಿದೆ ಎಂದು ಸಿಎಸ್‌ಐಆರ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಆಯೋಜಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಹೇಳಿದರು. ತುರ್ತು ಸಂದರ್ಭಗಳಲ್ಲಿ ಲಸಿಕೆಯನ್ನು ಬಳಸಲು ಅನುಮತಿ ನೀಡುವಂತೆ ಸಂಬAಧಿಸಿದ ಇಲಾಖೆ, ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಲಸಿಕೆಯ ಮೂರನೇ ಹಂತದ ಪ್ರಯೋಗಾರ್ಥ ಪರೀಕ್ಷೆ ಪ್ರಗತಿಯಲ್ಲಿದೆ. […]
Panel to track at risk comorbid patients
The Indian government has set up a committee to suggest ways to identify a priority group of about 10 million people below 50 years of age, who have multiple disorders such as severe hypertension and diabetes, for vaccination against covid-19 when the shots are available, NITI Aayog member-health V.K. Paul said on Tuesday. A committee […]
ವಿಷಮಶೀತ ಜ್ವರಕ್ಕೆ ದೇಶಿ ಲಸಿಕೆ
ವಿಷಮಶೀತ ಜ್ವರಕ್ಕೆ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ದ್ವಿಪ್ರತಿ ಕಾಯದ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿದೆ. ಸೀರಂ ಇನ್‌ಸ್ಟಿಟ್ಯೂಟ್, ಪಿಎಟಿಎಚ್, ಬಿಲ್ ಮತ್ತು ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದಕ್ಕೆ 10 ವರ್ಷ ತೆಗೆದುಕೊಂಡಿದೆ. ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಿದರು. ಎರಡು ಪ್ರತಿಕಾಯಗಳನ್ನು ಹೊಂದಿರುವ ಈ ಲಸಿಕೆ ಪಡೆದವರಲ್ಲಿ ವಿಷಮಶೀತ ಜ್ವರಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಿಗೆ ಕೈಗೆಟಕುವ […]
ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆ
ರೂಪಾಂತರಗೊಂಡ ಕೊರೊನಾ ವೈರಸ್ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದ್ದು, ವೈರಸ್‌ಗೆ ಎನ್440ಕೆ ಎಂದು ಹೆಸರಿಸಲಾಗಿದೆ. ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳಿಗೂ ಈ ವೈರಸ್‌ಗಳು ಬಗ್ಗುವುದಿಲ್ಲ. ಆಂಧ್ರಪ್ರದೇಶದಲ್ಲಿ ವೈರಸ್ ತೀವ್ರವಾಗಿ ಹರಡುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಂಡ, ಹರಿಯಾಣ, ಗುಜರಾತ್ ಹಾಗೂ ದಿಲ್ಲಿಯಲ್ಲೂ ಎನ್೪೪೦ಕೆ ಕಂಡು ಬಂದಿದೆ. ಕೋವಿಡ್ ಪುನಃ ಕಾಣಿಸಿಕೊಂಡ ವ್ಯಕ್ತಿಯೊಬ್ಬರು ನೋಯ್ಡಾದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ವೈರಸ್‌ನ ವಂಶವಾಹಿ(ಜಿನೋಮ್)ಯನ್ನು ವಿಶ್ಲೇಷಿಸಿ ದಾಗ, ಎನ್೪೪೦ಕೆ ವಿಧದ ವೈರಸ್‌ನಿಂದ ಅವರಲ್ಲಿ […]