AstraZeneca Vaccine Results a Shot in the Arm for India
AstraZeneca and Oxford University on Monday said their Covid-19 vaccine was up to 90% effective, brightening prospects of the much-awaited shot being available in India in the next few months. Serum Institute, AstraZeneca’s strategic manufacturing partner for the jab in India, said efficacy data from the Indian trials will be released in a month and […]
ಇ– ಸಂಜೀವಿನಿ ಮೂಲಕ 8 ಲಕ್ಷ ಜನರಿಗೆ ಆರೋಗ್ಯ ಸೇವೆ
ಆರೋಗ್ಯ ಸಚಿವಾಲಯ ಆರಂಭಿಸಿರುವ ಇ–ಸಂಜೀವಿನಿ ಯೋಜನೆ ಮೂಲಕ ಒಟ್ಟು ಎಂಟು ಲಕ್ಷ ಮಂದಿ ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ತಮಿಳುನಾಡು ರಾಜ್ಯವೊಂದರಲ್ಲೇ 2,59,904 ಮಂದಿ ಇ–ಸಂಜೀವಿನಿ ಒಪಿಡಿ ಆ್ಯಪ್ ಮೂಲಕ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ-2,19,175, ಎರಡನೇ ಸ್ಥಾನದಲ್ಲಿದೆ. ಕೇರಳ-58,000, ಹಿಮಾಚಲ ಪ್ರದೇಶ-46,647, ಮಧ್ಯ ಪ್ರದೇಶ-43,045, ಗುಜರಾತ್ -41,765, ಆಂಧ್ರ ಪ್ರದೇಶ -35,217, ಉತ್ತರಾಖಂಡ-26,819, ಕರ್ನಾಟಕ -23,008, ಮತ್ತು ಮಹಾರಾಷ್ಟ್ರದ -9,741 ಮಂದಿ ಈ ಸೇವೆ […]
ಕೋವಿಡ್ ಲಸಿಕೆ: ಹಿರಿಯರಿಗೆ ಆದ್ಯತೆ
ಜುಲೈ-ಆಗಸ್ಟ್ ೨೦೨೧ರೊಳಗೆ ಅಂದಾಜು ೫೦ ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಆದ್ಯತೆ ಮೇರೆಗೆ ಆರೋಗ್ಯ ಕಾರ್ಯಕರ್ತರು ಮತ್ತು ೬೫ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು. ಎಫ್‌ಸಿಸಿಐ, ಎಫ್‌ಎಎಲ್‌ಒ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿ, ಮೊದಲಿಗೆ ಆರೋಗ್ಯ ಕಾರ್ಯಕರ್ತರು ಮತ್ತು ೬೫ ವರ್ಷ ದಾಟಿದ ಹಿರಿಯ ನಾಗರಿಕರಿಗೆ, ಬಳಿಕ ೫೦ ರಿಂದ ೬೫ ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ. ಆನಂತರ ೫೦ಕ್ಕಿಂತ ಕಡಿಮೆ ವಯಸ್ಸಿನವರಿಗೆ ಆರೋಗ್ಯ ತಪಾಸಣೆ ಮಾಡಿ ಲಸಿಕೆ […]
ಲಸಿಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳ
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿPಯಿಂದ ೫೬-೬೯ ಹಾಗೂ೭೦ ವರ್ಷದ ಮೇಲಿನ ಆರೋಗ್ಯವಂತರಲ್ಲಿ ಪ್ರಬಲ ರೋಗನಿರೋಧಕ ಪ್ರತಿಕ್ರಿಯೆ ಕಂಡುಬAದಿದೆ. ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಪ್ರಕಾರ, ೫೬೦ ಕ್ಕೂ ಅಧಿಕ ಆರೋಗ್ಯವಂತ ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಕೋವಿಡ್‌ನಿಂದ ಹೆಚ್ಚು ಅಪಾಯಕ್ಕೊಳಗಾಗುತ್ತಿದ್ದ ೬೦ ವರ್ಷ ಮೀರಿದವರಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ. ಮೂರನೇ ಹಂತದ ಪ್ರಯೋಗದಲ್ಲಿ ಲಸಿಕೆ ಕೋವಿಡ್‌ನ್ನು ತಡೆಯುವ ಸಾಮರ್ಥ್ಯ ಹೊಂದಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಫಲಿತಾಂಶ ಕೆಲ ವಾರಗಳಲ್ಲಿ ಬರಲಿದೆ. ಯುವಜನರಲ್ಲೂ ಲಸಿಕೆ ರೋಗನಿರೋಧಕ ಶಕ್ತಿ […]
ಅಮೆರಿಕದ ಕೋವಿಡ್ ಮಂಡಳಿಗೆ ಭಾರತೀಯ ವೈದ್ಯೆ
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಕೋವಿಡ್–19 ಸಲಹಾ ಮಂಡಳಿಗೆ ತಮಿಳುನಾಡಿನ ಡಾ.ಸೆಲೀನ್ ಗೌಂಡರ್ ಆಯ್ಕೆಯಾಗಿದ್ದಾರೆ. ಡಾ.ಸೆಲೀನ್, ನ್ಯೂಯಾರ್ಕಿನ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯಕೀಯ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದಲ್ಲಿ ಕ್ಲಿನಿಕಲ್ ಸಹಾಯಕ ಪ್ರೊಫೆಸರ್. ಅವರ ತಂದೆ ರಾಜ್ ನಟರಾಜನ್ ಗೌಂಡರ್ ತಮಿಳುನಾಡಿನ ಈರೋಡ್ ಸಮೀಪದ ಪೆರುಮಾಪಾಳಯಂ ಎನ್ನುವ ಹಳ್ಳಿಯವರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಜ್ ಗೌಂಡರ್ 1968ರಲ್ಲಿ ಅಮೆರಿಕಕ್ಕೆ ತೆರಳಿದರು. ಪೆರುಮಾಪಾಳ್ಯಂನ ಜನರ ಸಹಾಯಕ್ಕಾಗಿ ರಾಜ್ ಗೌಂಡರ್ […]
Serum will have 200mn doses of AstraZeneca Vaccine by Jan
Pune-based Serum Institute of India (SI) will have about 200 million doses of the AstraZeneca-University of Oxford vaccine (Covishield) ready by January, according to sources. And, if it receives the requisite approvals from the Drugs Controller General of India (DCGI), it can start supplying for the local vaccination drive. In fact, SII will ramp up […]
ಕೋವಿಡ್ ಲಸಿಕೆ ಶೇ. 90 ಪರಿಣಾಮಕಾರಿ
ತಾನು ಅಭಿವೃದ್ಧಿಪಡಿಸಿರುವ ಲಸಿಕೆ ಕೋವಿಡ್ ತಡೆಗಟ್ಟುವಲ್ಲಿ ಶೇ. 90ರಷ್ಟು ಪರಿಣಾಮಕಾರಿಯಾಗಿದೆ ಎಂದು ಫೀಜರ್ ಹೇಳಿದೆ. ಅಮೆರಿಕ ಹಾಗೂ ಇನ್ನಿತರ ಐದು ರಾಷ್ಟ್ರಗಳ 44 ಸಾವಿರ ಮಂದಿ ಮೇಲೆ ಲಸಿಕೆ ಪ್ರಯೋಗಿಸಲಾಗಿದ್ದು, ಲಸಿಕೆ ಶೇ. 90ರಷ್ಟು ಪರಿಣಾಮಕಾರಿ ಎಂದು ತಿಳಿದುಬಂದಿದೆ. ತುರ್ತು ಸಂದರ್ಭದಲ್ಲಿ ಲಸಿಕೆಯನ್ನು ಬಳಸಲು ಅವಕಾಶ ನೀಡುವಂತೆ ನಿಯಂತ್ರಣ ಸಂಸ್ಥೆಗೆ ಮಾಸಾಂತ್ಯ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದು ಮಧ್ಯಂತರ ವರದಿಯಾಗಿದ್ದು, ಇದರ ಆಧಾರದಲ್ಲಿ ಸದ್ಯದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದುಕೊಳ್ಳುವಂತಿಲ್ಲ. ಫಲಿತಾಂಶ ಅಧ್ಯಯನ ಪೂರ್ಣಗೊಳ್ಳುವ ವೇಳೆಗೆ ಬದಲಾಗುವ […]
ಜನೌಷಧ ಕೇಂದ್ರಗಳಲ್ಲಿ ಆಯುರ್ವೇದ ಔಷಧ
ಜನೌಷಧ ಕೇಂದ್ರಗಳಲ್ಲಿ ಶೀಘ್ರವೇ ಕಡಿಮೆ ಬೆಲೆಯಲ್ಲಿ ಆಯುರ್ವೇದ ಔಷಧಿಗಳು ಲಭ್ಯವಾಗಲಿವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ. ಜನೌಷಧ ಕೇಂದ್ರಗಳಲ್ಲಿ ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ನೀಡಲಾಗುತ್ತಿದ್ದು, ಶೇ.10 ರಿಂದ ಶೇ.90ರವರೆಗೆ ರಿಯಾಯ್ತಿ ನೀಡಲಾಗುತ್ತಿದೆ. ಜನರಿಕ್ ಮೆಡಿಸಿನ್ ಆ್ಯಪ್ ಬಳಸಿ ಮನೆ ಸಮೀಪದಲ್ಲಿ ಜನೌಷಧ ಮಳಿಗೆ ಎಲ್ಲಿದೆ ಎಂಬುದನ್ನು ಜನ ತಿಳಿದುಕೊಳ್ಳಬಹುದು. ಬೇಕಿರುವ ಔಷಧದ ಹೆಸರನ್ನು ನಮೂದಿಸಿದರೆ, ಅದೇ ಔಷಧಿಯ ಸಂಯೋಜನೆಯ ಬೇರೆ ಕಂಪನಿಗಳ ಉತ್ಪನ್ನಗಳು ಎಲ್ಲಿ ಲಭ್ಯವಿವೆ ಎಂಬುನ್ನು ತಿಳಿದುಕೊಳ್ಳಬಹುದು. ರಾಜ್ಯದ ನಾನಾ […]
ಫೆಬ್ರವರಿಗೆ ಕೋವ್ಯಾಕ್ಸಿನ್ ಲಸಿಕೆ?
ದೇಶಿ ಕೋವಿಡ್–19 ಲಸಿಕೆ ಮುಂಬರುವ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಮನುಷ್ಯರ ಮೇಲೆ ನಡೆಸಿರುವ ಪ್ರಯೋಗದಲ್ಲಿ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತವೆಂದು ತಿಳಿದು ಬಂದಿದೆ. ಈ ತಿಂಗಳು ಲಸಿಕೆಯ ಕೊನೆಯ ಹಂತದ ಪ್ರಯೋಗ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಕಂಪನಿ ‘ಕೋವ್ಯಾಕ್ಸಿನ್’ ಲಸಿಕೆ ಅಭಿವೃದ್ಧಿ ಪಡಿಸುತ್ತಿವೆ. ಲಸಿಕೆ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಭರವಸೆ ವ್ಯಕ್ತವಾಗಿತ್ತು. ಆದರೆ, ಮುಂಚಿತವಾಗಿಯೇ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ […]

